ಭಿಕ್ಷುಕಿ ಕಾಲಿನ ಮೇಲೆ ಹರಿದ ಬಿಎಂಟಿಸಿ ಬಸ್
ದೊಡ್ಡಬಳ್ಳಾಪುರ: ತಾಲೂಕಿನ ಕನಸವಾಡಿ(ಮಧುರೆ)ಯಿಂದ ದೊಡ್ಡಬಳ್ಳಾಪುರಕ್ಕೆ ಬರುತ್ತಿದ್ದ ಬಿಎಂಟಿಸಿ ಬಸ್ಸು ಇಲ್ಲಿನ ಕೆರೆಬಾಗಿಲು ಬಳಿ ಭಿಕ್ಷುಕಿಯೊಬ್ಬರ ಕಾಲಿನ ಮೇಲೆ ಹರಿದಿದೆ. ಪರಿಣಾಮವಾಗಿ ಆಕೆಯ ಕಾಲಿಗೆ ತೀವ್ರ
ಗಾಯವಾಗಿದೆ. ಜೊತೆಗೆ ಆಕೆಯನ್ನು ಸರ್ಕಾರಿ ಆಸ್ಪತ್ರೆಯ ಬಾಗಿಲಲ್ಲೇ ಬಿಸಾಡಿ ಹೋಗಿರುವ ಘಟನೆ ಹೃದಯ ವಿದ್ರಾವಕವಾಗಿದೆ. ಗಾಯಾಳುವನ್ನು ನಾಗಮ್ಮ(60) ಹಿಂದೂಪುರ ಮೂಲದವರಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆ ನಡೆದ ತಕ್ಷಣ ಪ್ರಯಾಣಿಕರನ್ನು ಇಳಿಸಿ ಸ್ಥಳದಿಂದ ಚಾಲಕ ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.