ಸಂಗಮದಲ್ಲಿ ವಿದ್ಯಾರ್ಥಿ ನೀರುಪಾಲು
ಕನಕಪುರ: ತಾಲೂಕಿನ ಪ್ರೇಕ್ಷಣೀಯ ಸ್ಥಳವಾದ ಸಂಗಮದಲ್ಲಿ ವಿಹಾರಾರ್ಥವಾಗಿ ಬಂದಿದ್ದ ಐವರು ವಿದ್ಯಾರ್ಥಿಗಳಲ್ಲಿ ಒಬ್ಬನು ನೀರುಪಾಲಾದ ಘಟನೆ ನಡೆದಿದೆ.
ಮೃತನನ್ನು ಪಶ್ಚಿಮಬಂಗಾಳ ಮೂಲದ ನಿವಾಸಿ ಸುನೀಲ್ ಜಹಾರ್(21) ಎಂದು ತಿಳಿದು ಬಂದಿದ್ದು ಈತನು ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಪದವಿ ಮುಗಿಸಿ ತರಬೇತಿಗಾಗಿ ಮರಳಿ ಬಂದಿದ್ದ ಎಂದು ಹೇಳಲಾಗಿದೆ.
ಕಾವೇರಿ ನೀರಿನಲ್ಲಿ ಆಟವಾಡುವಾಗ ಕಾಲುಜಾರಿ ನೀರಿನಲ್ಲಿ ಕೊಚ್ಚಿಹೋದ ಸುನೀಲ್ನನ್ನು ರಕ್ಷಿಸಲು ಸಾಧ್ಯವಾಗದೆ ಅಘಾತಕ್ಕೀಡಾದ ಗೆಳೆಯರು ಸಾತನೂರು ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಪೊಲೀಸರು ಅಗ್ನಿಶಾಮಕ ದಳ ಹಾಗೂ ನುರಿತ ಈಜುಗಾರರ ಸಹಾಯದಿಂದ ಶೋಧನೆ ನಡೆಸಿದರೂ ಶವ ಪತ್ತೆಯಾಗದ ಕಾರಣ ಆಂಧ್ರದ ವಿಪ್ಪತ್ತು ಪರಿಶೋಧನಾ ದಳ ಸಹಾಯದಿಂದ ಹೆಲಿಕ್ಯಾಪ್ಟರ್ ಬಳಸಿ ಶೋಧನಡೆಸಿದರು. ಇದುವರೆಗೂ ಶವ ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರು.