ಹಲವೆಡೆ ವಿದ್ಯುತ್ ವ್ಯತ್ಯಯ
ರಾಮನಗರ: ವಿದ್ಯುತ್ ಮಾರ್ಗಗಳಿಗೆ ಎ.ಬಿ. ಕೇಬಲ್ ಅಳವಡಿಸುವುದು ಹಾಗೂ ವಿದ್ಯುತ್ ಪರಿವರ್ತಕಗಳಿಗೆ ಮಾಪಕ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವ ಪ್ರಯುಕ್ತ ಮಾ.4ರಂದು ಬಿಡದಿ ಉಪ ವಿಭಾಗ ವ್ಯಾಪ್ತಿಯ ಎಫ್-9 ಹೆಜ್ಜಾಲ ಫೀಡರ್ ವಿದ್ಯುತ್ ಮಾರ್ಗ ವ್ಯಾಪ್ತಿಗೆ ಒಳಪಡುವ ವಂಡರ್ ಲಾ, ಟ್ರಿನಿಟಿ ಬ್ರೆವರೇಜಸ್, ಫೆದರ್‌ಲೈಟ್, ಬಿ.ಎಂ. ರಸ್ತೆಯ ಹೆಜ್ಜಾಲ, ಮಂಚನಾಯಕನಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹಾಗೂ ಮಾ.5 ರಂದು ಬಿಡದಿ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಮಾರ್ಗ ವ್ಯಾಪ್ತಿಗೆ ಒಳಪಡುವ ಎಫ್-6 ಬಿಡದಿ ಫೀಡರ್ ವಿದ್ಯುತ್ ಮಾರ್ಗ ವ್ಯಾಪ್ತಿಗೆ ಒಳಪಡುವ ಬಿಡದಿ, ಕೇತಿಗಾನಹಳ್ಳಿ, ವಾಜರಹಳ್ಳಿ, ಬನ್ನಿಕುಪ್ಪೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಬಿಡದಿ ಉಪ ವಿಭಾಗದ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂನ ಬಿಡದಿ ಉಪ ವಿಭಾಗದ ಎಇಇ ಕೋರಿದ್ದಾರೆ.
ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ
ರಾಮನಗರ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಉಚಿತ ವಸತಿ, ಆಹಾರ, ಶಿಕ್ಷಣ ತರಬೇತಿಯನ್ನು ನೀಡುವ ಸಲುವಾಗಿ ಅರ್ಹ ಹಾಗೂ ಆಸಕ್ತ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಅಥ್ಲೆಟಿಕ್ಸ್, ಪದವಿಪೂರ್ವ ಕಾಲೇಜಿಗೆ ಅಥ್ಲೆಟಿಕ್ಸ್, ಕಬಡ್ಡಿ, ಖೋ-ಖೋ, ವಾಲಿಬಾಲ್, ಕುಸ್ತಿ, ಕ್ರಿಕೆಟ್, ಬಾಲ್, ಬ್ಯಾಡ್ಮಿಂಟನ್, ಪದವಿಗೆ ಅಥ್ಲೆಟಿಕ್ಸ್ , ಕಬಡ್ಡಿ, ಖೋ-ಖೋ, ವಾಲಿಬಾಲ್, ಕುಸ್ತಿ, ಕ್ರಿಕೆಟ್, ಬಾಲ್‌ಬ್ಯಾಡ್ಮಿಂಟನ್, ಥ್ರೋಬಾಲ್, ವೇಟ್‌ಲಿಫ್ಟಿಂಗ್, ಪವರ್ ಲಿಫ್ಟಿಂಗ್, ಹ್ಯಾಂಡ್‌ಬಾಲ್ ಕ್ರೀಡೆಗಳಿಗೆ ಆಯ್ಕೆ ನಡೆಯಲಿದೆ. ಕ್ರೀಡೆಯಲ್ಲಿ ಸಾಧನೆ ಮಾಡಿದ ಮತ್ತು ಮಾಡಲಿಚ್ಛಿಸುವ ಕ್ರೀಡಾಪಟುಗಳು ಮಾ.4ರ ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಮಂಡ್ಯದ ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ ಹಾಗೂ ಮಾ.3 ರಂದು ಮಧ್ಯಾಹ್ನ 2ರಿಂದ 4ವರೆಗೆ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಟ್ರಯಲ್ಸ್ ನಡೆಯಲಿದೆ. ಭಾಗವಹಿಸುವ ಕ್ರೀಡಾಪಟುಗಳು ಒಂದು ಭಾವಚಿತ್ರ ಮತ್ತು ಜನ್ಮದಿನಾಂಕ ಪತ್ರದೊಂದಿಗೆ ಹಾಜರಾಗಲು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ.9742109257 ಸಂಪರ್ಕಿಸಬಹುದು.