ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಗೆ ವಡವಾಟಿ ಶಾರದಾ ಭರತ್ ನೇಮಕ
ರಾಮನಗರ: ಜಿಲ್ಲೆಯವರಾದ ಹಿಂದುಸ್ಥಾನಿ, ಶಾಸ್ತ್ರೀಯ ಸಂಗೀತ, ಖ್ಯಾತ ವಚನ ಸಂಗೀತ ಗಾಯಕಿ ವಡವಾಟಿ ಶಾರದಾ ಭರತ್ ಅವರನ್ನು ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಸದಸ್ಯರನ್ನಾಗಿ ನೇಮಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.
ವಡವಾಟಿ ಶಾರದಾ ಭರತ್ ವಿಶ್ವ ವಿಖ್ಯಾತ ಕ್ಲಾರಿಯೋನೆಟ್ ವಾದಕರಾ ಡಾ. ಪಂ. ನರಸಿಂಹಲು ವಡವಾಟಿ ಅವರ ಪುತ್ರಿ. ವಚನದಲ್ಲಿ ಆಕಾಶವಾಣಿಯ ಎ ಗ್ರೇಡ್ ಕಲಾವಿದರು. ಅನೇಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಮಾನ್ಸೂನ್, ಬಸವೇಶ್ವರ ವಚನಾಮೃತ, ಸಂಗನ ಬಸವ ಮುಂತಾದ ಧ್ವನಿ ಸುರುಳಿ ಜನಪ್ರಿಯವಾಗಿವೆ.ಇವರು ಭಾರತ್ ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷರು ಹೌದು.
ಮೂಲತಃ ರಾಯಚೂರಿನವರಾದ ವಡವಾಟಿ ಶಾರದಾ ಭರತ್ ಕನಕಪುರದ ಲೇಖಕ, ಕವಿ, ನಿರೂಪಕ ಕೆ. ಯೋಗ ರವೀಶ್ ಭಾರತ್ ಅವರನ್ನು ವರಿಸುವುದರ ಮೂಲಕ ರಾಮನಗ ಜಿಲ್ಲೆಯ ಸೊಸೆಯಾಗಿದ್ದಾರೆ.