ನ್ಯಾಯದಾನ ವಿಳಂಬ ಖಂಡಿಸಿ ವಕೀಲರಿಂದ ಕಲಾಪ ಬಹಿಷ್ಕಾರ
ಆನೇಕಲ್ಲು: ಪಟ್ಟಣದ ಅಪರ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯದಾನ ವಿಳಂಬ, ಎಪಿಪಿ ಮಾತಿಗೆ ಹೆಚ್ಚಿನ ಮಾನ್ಯತೆ, ಏಕ ಪಕ್ಷೀಯ ನಿರ್ಧಾರ ಮಾಡುತ್ತಾರೆಂದು ಆರೋಪಿಸಿ ಆನೇಕಲ್ ತಾಲೂಕು ವಕೀಲರ ಸಂಘ ಹಾಗೂ ವಕೀಲರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಆನೇಕಲ್ಲಿನ ಅಪರ ಸಿವಿಲ್ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೆ ಪ್ರತಿಭಟನೆ ಸಲ್ಲಿಸಿದರು.
ಕೋರ್ಟ್ ಆವರಣದಲ್ಲಿ ಜಮಾಯಿಸಿದ ವಕೀಲರು ತುರ್ತು ಸಭೆ ನಡೆಸಿ ಶುಕ್ರವಾರದಂದು ನ್ಯಾಯಾಲಯಕ್ಕೆ ಹಾಜರಾಗಬಾರದು. ಜಿಲ್ಲಾ ಸತ್ರ ನ್ಯಾಯಾಧೀಶರ ಗಮನಕ್ಕೆ ತರಬೇಕು. ಅಸಿಸ್ಟೆಂಟ್ ಪ್ರಾಸಿಕ್ಯೂಟರ್ ರಾಜೇಶ್ವರಶೆಟ್ಟಿ ಅವರ ಮೇಲೆ ಜಿಲ್ಲಾ ಪ್ರಾಸಿಕ್ಯೂಟರ್ ನಿರ್ದೇಶಕರಿಗೆ ದೂರು ನೀಡಿ ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಕರ್ತವ್ಯ ಲೋಪವೆಸಗಿದ್ದಾರೆ ಎಂದು ಆರೋಪಿಸಿದರು.
ಶುಕ್ರವಾರ ಕಲಾಪ ಬಹಿಷ್ಕಾರ: ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಜಿಲ್ಲಾ ಸತ್ರ ನ್ಯಾಯಾಧೀಶ ಸೋಮಶೇಖರ್ ಅವರನ್ನು ಭೇಟಿ ಮಾಡಿದ ನಿಯೋಗ ಆನೇಕಲ್ಲಿನ ಘಟನೆ ಬಗ್ಗೆ ವಿವರಣೆ ನೀಡಿದರು.
ಎಪಿಪಿ ಶೆಟ್ಟಿ ವರ್ಗಾವಣೆ: ಕರ್ತವ್ಯ ನಿರ್ವಹಿಸದಂತೆ ಮೌಖಿಕ ಆದೇಶ ಬಂದಿದ್ದು ಎಪಿಪಿ ರವರು ವರ್ಗಾವಣೆಯಾಗಿದೆ. ಈ ಸಂಬಂಧ ನಮ್ಮ ಹೋರಾಟಕ್ಕೆ ಅರ್ಧ ನ್ಯಾಯ ಸಿಕ್ಕಿದ್ದು ಎಲ್ಲ ರೀತಿಯ ಪರಿಹಾರ ಪಡೆಯುವುದಾಗಿ ಪದಾಧಿಕಾರಿ ವಕೀಲರು ತಿಳಿಸಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ರಮೇಶ್, ಪಟಾಪಟ್ ಪ್ರಕಾಶ್, ವಿಜಯಕುಮಾರ್ ಇದ್ದರು.