ಭಾರತ್ ವಿಕಾಸ್ ಪರಿಷದ್ಗೆ ಆಯ್ಕೆ
ಚನ್ನಪಟ್ಟಣ: ಭಾರತ್ ವಿಕಾಸ್ ಪರಿಷದ್, ಕಣ್ವ ಶಾಖೆಯ ನೂತನ ಅಧ್ಯಕ್ಷರಾಗಿ ವಸಂತಕುಮಾರ್, ಕಾರ್ಯದರ್ಶಿಯಾಗಿ ಬಿ.ಎನ್.ಕಾಡಯ್ಯ ಹಾಗೂ ಖಜಾಂಚಿಯಾಗಿ ಬೆಸ್ಕಾಂ ಎಸ್.ಶಿವಲಿಂಗಯ್ಯ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಭಾವಿಪ ಸರ್ವಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಚುನಾವಣಾ ಅಧಿಕಾರಿಗಳಾಗಿ ಕೇಂದ್ರ ಭಾ.ವಿ.ಪ ಖಜಾಂಚಿ ಶ್ರೀನಾಥ್ ಕಾರ್ಯನಿರ್ವಹಿಸಿದರು. ಭಾ.ವಿ.ಪ ಕಾರ್ಯದರ್ಶಿ ಟಿ.ಚನ್ನಪ್ಪ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಬಿ.ವಿ.ಜಯರಾಮೇಗೌಡ ವರದಿ ಮಂಡಿಸಿದರು. ಗಾಯನ ಸಂಚಾಲಕ ಕೆ.ಬಿ.ಉಮೇಶ್ ವಂದಿಸಿದರು.