'ಲೋಕಾ'ಬಲೆಗೆ ತೋಟಗಾರಿಕೆ ಅಧಿಕಾರಿ
ಆನೇಕಲ್ಲು: ರೈತರೊಬ್ಬರಿಂದ ತೋಟಗಾರಿಕೆ ಸವಲತ್ತು ನೀಡಲು ರು.90 ಸಾವಿರ ಲಂಚ ಪಡೆಯುತ್ತಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ.ಇಲ್ಲನ ತೋಟಗಾರಿಕೆ ಇಲಾಖೆ ಸಹಾಯಕ ಅಧೀಕ್ಷಕ ಆಲಿಂಗಯ್ಯ ಲೋಕಾ ಬಲೆಗೆ ಬಿದ್ದ ಅಧಿಕಾರಿ. ರೈತ ವೆಂಕಟಪ್ಪ ದೂರು ನೀಡಿದ್ದು ಸಬ್ಸಿಡಿ ಕೊಡಿಸಲು ರು.90 ಸಾವಿರ ತರಲು ಬೇಡಿಕೆಯಿಟ್ಟಿದ್ದ. ರೈತ ಅತ್ತಿಬೆಲೆ ಬಳಿ ಹಣ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಬನ್ನೇರುಘಟ್ಟ ಉದ್ಯಾನವನದಲ್ಲಿ ಕರಡಿ ಸಾವು
ಆನೇಕಲ್ಲು: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕರಡಿ ಸಫಾರಿ ಕೇಂದ್ರದಲ್ಲಿನ ಎಲ್ಸ(24) ಎಂಬ ಕರಡಿ ಮೃತ ಪಟ್ಟಿದೆ ಎಂದು ಉದ್ಯಾನಾಧಿಕಾರಿ ರಂಗಸ್ವಾಮಿ ತಿಳಿಸಿದ್ದಾರೆ. ಪೂರ್ಣ ಆಯಸ್ಸನ್ನು ಕಳೆದಿರುವ ಕರಡಿ ಇತ್ತೀಚೆಗೆ ವಯೋ ಸಂಬಂಧಿ ಖಾಯಿಲೆಯಿಂದ ಬಳಲುತ್ತಿತ್ತು. ಈ ಕರಡಿಯನ್ನು ತುಮಕೂರಿನ ಕಲಂದರ್ಗಳಿಂದ 2008 ರಲ್ಲಿ ಸಂರಕ್ಷಿಸಿತರಲಾಗಿತ್ತು.