ಶಾಸಕ ಎಚ್.ಸಿ. ಬಾಲಕೃಷ್ಣ ಹುಟ್ಟುಹಬ್ಬ
ಮಾಗಡಿ: ಶಾಸಕ ಎಚ್.ಸಿ. ಬಾಲಕೃಷ್ಣ ತಮ್ಮ 49ನೇ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಎಚ್.ಸಿ.ಬಾಲಕೃಷ್ಣ ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ಪಟ್ಟಣದ ಐತಿಹಾಸಿಕ ಪ್ರಸಿದ್ಧ ತಿರುಮಲೆ ರಂಗನಾಥಸ್ವಾಮಿ ದೇವರಿಗೆ ಹಾಗೂ ವರಸಿದ್ದಿವಿನಾಯಕಸ್ವಾಮಿಗೆ ಅಭಿಷೇಕ, ಅರ್ಚನೆ ವಿಶೇಷ ಪೂಜೆ ಸಲ್ಲಿಸಿ ಅಭಿಮಾನಿಗಳು ಪ್ರಾರ್ಥಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಇದೇ ವೇಳೆ ಶಾಸಕ ಎಚ್.ಸಿ. ಬಾಲಕೃಷ್ಣ ವಿನಾಯಕಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ತಾಲೂಕಿನಲ್ಲಿ ಉತ್ತಮ ಮಳೆ ಬೀಳಲಿ, ರೈತರ,ಮಹಿಳೆಯರ ನೀರಿನ ಸಮಸ್ಯೆ ಬಗೆಹರಿಯಲಿ ಎಂದು ಪ್ರಾರ್ಥಿಸಿದರು.
ಜಿಪಂ ಸದಸ್ಯರಾದ ಎಂ.ಕೆ.ಧನಂಜಯ, ಕೆ.ಮುದ್ದುರಾಜ ಯಾದವ್, ವಿಜಯಕುಮಾರ್, ಹಂಸಕುಮಾರಿ, ತಾಪಂ ಅಧ್ಯಕ್ಷ ಜಿ.ಕೃಷ್ಣ, ಎಸ್. ಕಾಂತರಾಜು, ಜಿ.ವಿ. ರಾಮಣ್ಣ, ಎಂ. ರಾಮಣ್ಣ, ಬಮೂಲಲ್ನರಸಿಂಹಮೂರ್ತಿ, ಎಚ್.ಸಿ. ಬಾಲಕೃಷ್ಣ ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ಸೀಬೇಗೌಡ, ರೂಪೇಶ್ಕುಮಾರ್, ಎಂ.ಆರ್. ಮಂಜುನಾಥ್, ನರಸಿಂಹಮೂರ್ತಿ, ಗಂಗರಾಜು, ಕೃಷ್ಣಪ್ಪ, ಜಯಕುಮಾರ್, ರಾಜಣ್ಣ, ಶಂಕರಪ್ಪ, ಮೂರ್ತಿ, ಬಿ.ಟಿ. ವೆಂಕಟೇಶ್,ಪುರಸಭಾ ಸದಸ್ಯರಾದ ನಾಗೇಂದ್ರ, ಬಸವರಾಜು, ಎಚ್.ಜೆ. ಪುರುಷೋತ್ತಮ್,ನವಾಬ್, ಇಲಿಯಾಜ್, ಫೈರೋಜ್, ಉದ್ದೀಶ್, ಕುದೂರು ಹನುಮಂತರಾಜಪ್ಪ, ವೀರಪ್ಪ ಸೇರಿದಂತೆ ನೂರಾರು ಮಂದಿ ಅಭಿಮಾನಿಗಳು ಜೆಡಿಎಸ್ ಮುಖಂಡರು ಶಾಸಕ ಬಾಲಕೃಷ್ಣ ಅವರಿಗೆ ಶುಭ ಕೋರಿದರು.