ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕುವೆಂಪು, ಜಿ.ಎಸ್.ಶಿವರುದ್ರಪ್ಪ ಸಾಹಿತ್ಯ ಲೋಕದ ದಿಗ್ಗಜರು: ಕೃಷ್ಣೇಗೌಡ

Mainashree
Updated On : 2 Jan 2014, 12:23 pm

ಚನ್ನಪಟ್ಟಣ: ರಾಷ್ಟ್ರಕವಿ ಕುವೆಂಪು ಮತ್ತು ಡಾ. ಜಿ.ಎಸ್.ಶಿವರುದ್ರಪ್ಪ ಕನ್ನಡ ಸಾಹಿತ್ಯ ಲೋಕದ ದಿಗ್ಗಜರು ಎಂದು ಮದ್ದೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕರಾದ ಡಾ. ಎಚ್.ಕೃಷ್ಣೇಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ಕೆಂಗಲ್ ಬಳಿಯ ಹೊಂಬೇಗೌಡ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ, ತಾಲೂಕು ಚುಟುಕು ಸಾಹಿತ್ಯ ಪರಿಷತ್ತು, ಡಾ. ಭೀಮ್‌ರಾವ್ ಅಂಬೇಡ್ಕರ್ ಸಾಂಸ್ಕೃತಿಕ ಕಲಾ ಟ್ರಸ್ಟ್, ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಸಹಯೋಗದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಸ್ಮರಣೆ ಹಾಗೂ ಡಾ.ಜಿ.ಎಸ್.ಶಿವರುದ್ರಪ್ಪನವರಿಗೆ ಭಾವಗೀತನಮನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ಕುವೆಂಪು ಮತ್ತು ಡಾ.ಜಿ.ಎಸ್. ಶಿವರುದ್ರಪ್ಪನವರು ಗೊಡ್ಡು ಸಂಪ್ರದಾಯಗಳನ್ನು ದಿಕ್ಕರಿಸಿದ, ವೈಚಾರಿಕ ಚಿಂತಕರು ಎಂದರು.
 ಕನ್ನಡಿಗರಾದ ನಮಗೆ ತಮ್ಮ ಸಮಗ್ರ ಸಾಹಿತ್ಯದ ಮೂಲಕ  ಅತ್ಯಮೂಲ್ಯ ಮಾನವೀಯ ಮೌಲ್ಯಗಳ ಸಂದೇಶ ರವಾನಿಸಿ ವಿಶ್ವಮಾನವರೆನಿಸಿಕೊಂಡು ನಾಡಗೀತೆ, ರೈತಗೀತೆ, ನೀಡುವ ಮೂಲಕ ನಾಡಪ್ರೇಮ ಮತ್ತು ಅನ್ನದಾತರ ಬಗ್ಗೆ ಅಭಿಮಾನ ಮೂಡಿಸಿದ ಕುವೆಂಪು, ಭಾವನಾತ್ಮಕ ಸಂದೇಶ ಸಾರಬಲ್ಲ, ಭಾವಗೀತೆಗಳನ್ನು ರಚಿಸಿದ ಡಾ.ಜಿ.ಎಸ್.ಶಿವರುದ್ರಪ್ಪರನ್ನು ಈ ನಾಡಲ್ಲಿ ಪಡೆದ ನಾವು ಧನ್ಯರ. ಅವರು ಹಾಕಿಕೊಟ್ಟ ಸಾಹಿತ್ಯದ ಸನ್ಮಾರ್ಗದಲ್ಲಿ ಸಾಗಿ ನಮ್ಮ ಬದುಕನ್ನು ಸಾಕಾರಗೊಳಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲರಾದ ರಮೇಶ್ ತಾಂತ್ರಿಕ ವಿದ್ಯಾರ್ಥಿಗಳಿಗೂ ಸಾಹಿತ್ಯದ ನಂಟು ಬೇಕಿದೆ. ನಾಡಿಗೆ ಕನ್ನಡ ಸಾಹಿತ್ಯದ ಮೂಲಕ ಬೆಳಕು ತೋರಿದ ಕುವೆಂಪು ಮತ್ತು ಡಾ.ಜಿ.ಎಸ್.ಶಿವರುದ್ರಪ್ಪ ಗುರು-ಶಿಷ್ಯ ಪರಂಪರೆಗೆ ಉತ್ತಮ ಮುನ್ನುಡಿ ಬರೆದ ದಾರ್ಶನಿಕರು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ದೊಡ್ಡಆಲಹಳ್ಳಿ ಡಿ.ಪುಟ್ಟಸ್ವಾಮಿಗೌಡ, ರೈತ ಜನ ಜಾಗೃತಿ ನಗರಾಧ್ಯಕ್ಷರಾದ ಟಿ.ರಮೇಶ್, ತಾಲೂಕು ಸಮತಾ ಸೈನಿಕ ದಳದ ಅಧ್ಯಕ್ಷ ಚಕ್ಕೆರೆ ಲೋಕೇಶ್, ಶಿಕ್ಷಕರಾದ ಕೂರಣಗೆರೆ ಸಿ. ಚಂದ್ರಶೇಖರ್, ಎಂ.ಟಿ.ನಾಗರಾಜು ಜಿಲ್ಲಾ ಲೇಖಕರ ವೇದಿಕೆ ಪ್ರಧಾನ ಕಾರ್ಯರ್ಶಿ ಸಿ.ಎ. ಶಾಂತಕುಮಾರ್ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಮರಿದೇವರು ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement