ಕೇಕ್ ಕತ್ತರಿಸುವ ಮೂಲಕ 2014ಕ್ಕೆ ಸ್ವಾಗತ
ನೆಲಮಂಗಲ: ಪಟ್ಟಣದ ವಿವಿಧ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರು ಕೇಕ್ ಕತ್ತರಿಸುವ ಮೂಲಕ 2014 ರ ಹೊಸವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರು.
ತಾಲೂಕಿನಾದ್ಯಂತ ಯುವಕರು ತಮ್ಮದೇ ಆದ ರೀತಿಯಲ್ಲಿ ಬೀದಿ ಬೀದಿಗಳಲ್ಲಿ ಕೇಕ್ ತಂದು ಕತ್ತರಿಸಿ ಹಂಚುವ ಮೂಲಕ ಪರಸ್ಪರ ಹೊಸವರ್ಷದ ಶುಭಕಾಮನೆಗಳನ್ನು ತಿಳಿಸಿದರು. ತಮ್ಮಲ್ಲಿನ ಪರಸ್ಪರ ಒಗ್ಗಟ್ಟು, ಪ್ರೀತಿ, ವಿಶ್ವಾಸ ಹಾಗೂ ಸ್ನೇಹ ವೃದ್ಧಿಯಾಗುವಂತೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಪ್ರತಿ ವರ್ಷದಂತೆ ಈ ವರ್ಷವು ಸಹ ಪಟ್ಟಣದ ಸೊಂಡೆಕೊಪ್ಪ ಗಣೇಶನಿಗೆ ಸಾವಿರಾರು ಜನ ಪೂಜೆ ಸಲ್ಲಿಸಿದರು. ತಾಲೂಕಿನಾದ್ಯಂತ ಸಾರ್ವಜನಿಕರು ಸಮಾನತೆಯಿಂದ, ಪ್ರೀತಿ, ಸಹೋದರತ್ವ ಹೊಂದಿ ಎಲ್ಲಾ ಧರ್ಮ, ಜಾತಿಯವರು ಒಂದೇ ಎಂಬ ಮನೋಭಾವನೆಯಿಂದ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.