ದಂಪತಿ, ಮಗು ನಾಪತ್ತೆ
ರಾಮನಗರ: ತಾಲೂಕಿನ ಕೆಂಪೇಗೌಡನದೊಡ್ಡಿ ಗ್ರಾಮದ 28 ವರ್ಷದ ಮಧು, ಈತನ ಪತ್ನಿ 22 ವರ್ಷದ ನಾಗಮ್ಮ
ದಂಪತಿ 2 ವರ್ಷದ ಪುತ್ರಿ ಸಮೇತ ಡಿ.1ರಿಂದ ಕಾಣೆಯಾಗಿದ್ದಾರೆ. ನಾಗಮ್ಮ ಅವರ ತವರೂರಾದ ಸಿದ್ದನಹಳ್ಳಿಗೆ ಹೋದವರು ಮತ್ತೆ ವಾಪಾಸಾಗಿಲ್ಲ. ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು ಹೊಂದಿರುವ ಮಧು ಕನ್ನಡ, ತಮಿಳು, ಹಿಂದಿ, ಅಸ್ಸಾಮಿ ಹಾಗೂ ಇಂಗ್ಲಿಷ್ ಭಾಷೆ ಮಾತನಾಡಬಲ್ಲರು. ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು ಹೊಂದಿರುವ ನಾಗಮ್ಮ ಕನ್ನಡ ಭಾಷೆ ಬಲ್ಲರು. ಈ ದಂಪತಿ ಹಾಗೂ ಮಗು ಅಂಜುವಿನ ಬಗ್ಗೆ ಸುಳಿವು ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಗ್ರಾಮಾಂತರ ಪೊಲೀಸರು ಕೋರಿದ್ದಾರೆ.