ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹೊಸ ವರ್ಷಕ್ಕೆ ಸರಕಾರಿ ಆಸ್ಪತ್ರೆಗೆ ಬಿಎಂಟಿಸಿ ಬಸ್ ವ್ಯವಸ್ಥೆ

Mainashree
Updated On : 2 Jan 2014, 12:24 pm

ಹೊಸಕೋಟೆ: ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಿಂದ ಕಾಡುಗೊಡಿ ಮಾರ್ಗವಾಗಿ ದೊಮ್ಮಲೂರಿಗೆ ಬಿಎಂಟಿಸಿ ಬಸ್ಸನ್ನು ಶಾಸಕ ಎನ್. ನಾಗರಾಜ್ ಚಾಲನೆ ನೀಡಿದರು.
ಈ ಬಸ್ ದಿನಕ್ಕೆ 4 ಬಾರಿ ಬಂದು ಹೊಗುತ್ತದೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ರ್ಸ್ವಜನಿಕರಿಗೆ ಅನುಕೂಲವಾಗುತ್ತದೆ. ಈ ಮೊದಲು ರೋಗಿಗಳು ಸರಕಾರಿ ಆಸ್ಪತ್ರೆಗೆ ಹೊಗಬೇಕಾದರೆ ಪರದಾಡಕಿತ್ತು. ಹೊಸಕೋಟೆ ಪಟ್ಟಣದ ಬಸ್ ನಿಲ್ದಾಣಕ್ಕೆ ಬರುವ ಬಸ್ಸುಗಳು ಸರಕಾರಿ ಆಸ್ಪತ್ರೆ ಮಾರ್ಗವಾಗಿ ಹೊಗಬೇಕೆಂದು ಸಾರ್ವಜನಿಕರು ಶಾಸಕರಿಗೆ ಮನವಿಮಾಡಿದರು. ಇದೇ ಸಂದರ್ಭದಲ್ಲಿ ಕುರುಬರ ಸಂಘದ ಅಧ್ಯಕ್ಷ ಎಸ್.ಐ.ಶ್ರೀನಿವಾಸ್, ಬಿಎಂಟಿಸಿ ಮೇಲ್ವಿಚಾರಕರಾದ ನವೀನ್,  ತಿಮ್ಮರಾಯಪ್ಪ, ಪುರಸಭೆ ಸದಸ್ಯರಾದ ಶಿವಾನಂದ್, ತಾಲೂಕು ಕಾಂಗ್ರೆಸ್ ಅಧ್ಯಕ್ಷರಾದ ವಿ.ಪ್ರಸಾದ್, ಕಲ್ಲಪ್ಪ, ಮೋಹನ್ ಕುಮಾರ್, ನಾಗರಾಜ್, ಶಿವಾನಂದ ಬಾಬು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement