ಕ್ಯಾಟ್ ಫಿಶ್ ಅಕ್ರಮ ಸಾಕಣೆ ತೆರವು
ದೊಡ್ಡಬಳ್ಳಾಪುರ: ತಾಲೂಕಿನ ಸಕ್ಕರೆಗೊಲ್ಲಹಳ್ಳಿಯಲ್ಲಿ ತುಮಕೂರು ಮೂಲದ ವ್ಯಕ್ತಿಯೊಬ್ಬರು 4 ಹೊಂಡಗಳಲ್ಲಿ ಅಕ್ರಮವಾಗಿ ಸಾಕಣೆ ಮಾಡುತ್ತಿದ್ದ ಕ್ಯಾಟ್ ಫಿಶ್‌ಗಳನ್ನು ತಾಲೂಕು ಆಡಳಿತ ತೆರವು ಮಾಡಿದೆ. ಸರ್ದಾರ್ ಪಟೇಲ್ ಎಂಬುವವರು ಅಕ್ರಮವಾಗಿ ಕ್ಯಾಟ್‌ಫಿಶ್ ಸಾಕುತ್ತಿದ್ದರು.
ವಾಸ್ತವವಾಗಿ ಕ್ಯಾಟ್‌ಫಿಶ್ ಸಾಕಣೆಯನ್ನು ಸುಪ್ರೀಂಕೋರ್ಟ್ ನಿಷೇಧಿಸಿದೆ. ಆದರೆ ದೊಡ್ಡಬಳ್ಳಾಪುರ ಮತ್ತು ಗ್ರಾಮಾಂತರ ಜಿಲ್ಲೆಯ ಹಲವೆಡೆ ಈ ಬಗೆಯ ಅಕ್ರಮ ಸಾಕಣೆ ಮತ್ತು ಮಾರಾಟ ನಡೆಯುತ್ತಲೇ ಇದೆ.
ಈ ಬಗ್ಗೆ ಸ್ಥಳೀಯರು ಕೊಟ್ಟ ದೂರಿನನ್ವಯ ತಹಸೀಲ್ದಾರರು ದಾಳಿ ನಡೆಸಿ ಹೊಂಡಗಳನ್ನು ತೆರವು ಮಾಡಿದ್ದಾರೆ.
ಜನರ ಆರೋಗ್ಯಕ್ಕೆ ಮಾರಕವಾಗಿರುವ ಕ್ಯಾಟ್ ಫಿಶ್ ಸಾಕಣೆ ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳು ಕೊಟ್ಟ ಆದೇಶದನ್ವಯ ಈ ಹಿಂದೆ ಹಲವೆಡೆ ಸಾಕಣೆ ನಿಂತಿತ್ತು. ಆದರೂ ಮತ್ತೆ ಅಕ್ರಮ ತಲೆಎತ್ತಿರುವುದು ಆತಂಕಕಾರಿ ಎಂದು ಸ್ಥಳೀಯರು ದೂರಿದ್ದಾರೆ.