ಪ್ರೊ.ಸಿ. ಎಲ್ಲಾರೆಡ್ಡಿಗೆ ಸನ್ಮಾನ
ಕನಕಪುರ: ಕನಕಪುರ ತಾಲೂಕು ಕೋಡಿಹಳ್ಳಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೇವೆಸಲ್ಲಿಸಿ ನಿವೃತ್ತರಾದ ಪ್ರಾಂಶುಪಾಲ ಪ್ರೊ.ಸಿ. ಎಲ್ಲಾರೆಡ್ಡಿಯವರನ್ನು ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಆತ್ಮೀಯವಾಗಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಎಲ್ಲಾರೆಡ್ಡಿ, ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಎರಡೂವರೆ ವರುಷಗಳು ತಮ್ಮ ಜೀವನದಲ್ಲಿ ಅವಿಸ್ಮರಣೀಯವಾಗಿದ್ದು, ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ಸಹಕಾರದಿಂದಾಗಿ ಗ್ರಾಮೀಣ ಪ್ರದೇಶದಲ್ಲಿಯೂ ಜಿಲ್ಲೆಯಲ್ಲಿಯೇ ಉತ್ತಮವಾದ ಕಾಲೇಜು ಕಟ್ಟಡವನ್ನು ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.
ಸಮಾರಂಭದ ಮುಖ್ಯಅತಿಥಿಗಳಾಗಿ ಮಹಾರಾಣಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಲ್.ಎನ್.ರೆಡ್ಡಿ, ಮಲ್ಲೇಶ್ವರಂ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್, ರಾಮನಗರ ಪದವಿ ಕಾಲೇಜಿನ ಕ್ಯಾಪ್ಟನ್,ಪ್ರೊ.ರಾಘವೇಂದ್ರ, ಕನಕಪುರ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ವೃಷಭೇಂದ್ರಮೂರ್ತಿ, ಬೆಂಗಳೂರಿನ ಪ್ರೊ.ಗಂಗಾಧರ್, ನಟೇಶ್ ಬಾಬು, ಪ್ರಭಾರಿ ಪ್ರಾಂಶುಪಾಲ ಪ್ರೊ.ಎ.ಸಿ.ಚೂಡಲಿಂಗಯ್ಯ, ಪ್ರೊ. ಫಾತಿಮಾ, ಪ್ರೊ.ರಮ್ಯಾ, ಪ್ರೊ.ಮರ್ಸಿ, ಪ್ರೊ.ರತ್ನಮ್ಮ ಪಾಲ್ಗೊಂಡಿದ್ದರು.