ಸಂಸ್ಕಾರವಂತ, ಆದರ್ಶ ವ್ಯಕ್ತಿಯಾಗಿ ಬದುಕು ನಡೆಸಿ: ಸ್ವಾಮೀಜಿ
ಮಾಗಡಿ: ಸರಳ, ಸಂಸ್ಕಾರವಂತ, ಆದರ್ಶ ವ್ಯಕ್ತಿಯಾಗಿ ಬದುಕು ನಡೆಸುವಂತೆ ಕಂಚಗಲ್ ಬಂಡೇಮಠದ ಬಸವಲಿಂಗಸ್ವಾಮಿ ಕರೆ ನೀಡಿದರು.
ಅವರು ಮಾಗಡಿ ಪಟ್ಟಣದ ಅರಳೇಪೇಟೆ ಶ್ರೀ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ರಾಷ್ಟ್ರಕವಿ ದಿ. ಜಿ.ಎಸ್.ಶಿವರುದ್ರಪ್ಪ ಅವರ ನುಡಿನಮನ ಮತ್ತು ಕ್ಯಾಲೆಂಡರ್ ಬಿಡುಗಡೆ, ಹಿರಿಯ ಗಣ್ಯರಿಗೆ ಸನ್ಮಾನ ಹಾಗೂ ಅಮಾವಾಸ್ಯೆ ಪೂಜಾ ಕೈಂಕರ್ಯ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
2014 ಏಪ್ರಿಲ್ 1ಕ್ಕೆ 107 ವರ್ಷಕ್ಕೆ ಕಾಲಿಡುವ ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಅವರ ಗುರುವಂದನೆ ಕಾರ್ಯಕ್ರಮವನ್ನು ಮಾಗಡಿ ಪಟ್ಟಣದಲ್ಲಿ ಏಪ್ರಿಲ್ ತಿಂಗಳಲ್ಲಿ ಆಚರಿಸಲು ಚಿಂತಿಸಲಾಗಿದೆ. ಇದಕ್ಕಾಗಿ ವೀರಶೈವ ಸಮಾಜದ ಎಲ್ಲಾ ಬಂಧುಗಳ ಸಹಕಾರ ಹಾಗೂ ಪ್ರೋತ್ಸಾಹ ಅಗತ್ಯವಿದೆ ಎಂದು ವೀರಶೈವ ಮಹಾ ಸಭಾದ ಕಾರ್ಯದರ್ಶಿ ಪಿ.ಗಂಗಾಧರಯ್ಯ ತಿಳಿಸಿದರು.
ತಾಲೂಕು ವೀರಶೈವ ಮಹಾ ಸಭಾದ ಅಧ್ಯಕ್ಷ ಹಾಗೂ ಜಿ.ಪಂ.ಮಾಜಿ ಸದಸ್ಯ ಶಿವರುದ್ರಪ್ಪ ಮಾತನಾಡಿದರು.
ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಪಿ. ರೇಣುಕಾರಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಖ ಡಾ.ಸಿ. ರಾಜಶೇಖರ್, ಡಾ.ಮುದಾಳ್ ಹಾವಗಿ ರಾತ್, ಡಾ.ಚಂದ್ರಲೇಖ ಅವರನ್ನು ಬಸವಲಿಂಗಸ್ವಾಮಿ ಸನ್ಮಾನಿಸಿದರು. ಡಾ.ಸಿ ವಚನಕಾರ ಮಲ್ಲಿಕಾರ್ಜುನಯ್ಯ ಅವರಿಂದ ಗೀತಗಾಯನ ನಡೆಯಿತು.
ಜಿಲ್ಲಾ ಗೌರವಾಧ್ಯಕ್ಷ ಮುದ್ದವೀರಪ್ಪ, ಜಿಲ್ಲಾ ಕಾರ್ಯದರ್ಶಿ ಆರ್.ಸಿ. ಹೊನ್ನಗಂಗಪ್ಪ, ಸದಾಶಿವಯ್ಯ, ಪುರಸಭಾ ಸದಸ್ಯ ಶಿವರುದ್ರಮ್ಮ ವಿಜಯಕುಮಾರ್, ಮಹೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭುದೇವ್, ರುದ್ರಮೂರ್ತಿ,ಅರಸನಾಳ್, ಸಿದ್ದೇಶ್ ಇತರರು ಇದ್ದರು.