ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅದರಂಗಿ ಕಾಡಿನತ್ತ ಕಾಡಾನೆ ದಂಡು

Mainashree
Updated On : 4 Jan 2014, 12:17 pm

ನೆಲಮಂಗಲ: ತಾಲೂಕಿನ ಸೋಂಪುರದ ಹನುಮಂತಕೆರೆಯಲ್ಲಿದ್ದ 5 ಕಾಡಾನೆಗಳ ಹಿಂಡು ಮುಂದೆ ಸಾಗಿ ಮಾಗಡಿ ತಾಲೂಕಿನ ಅದರಂಗಿ ಕಾಡು ಸೇರಿವೆ. ಒಂದು ಸಲಗ ವೀರಸಾಗರದ ಕಾಡಿನಲ್ಲಿ ಬೀಡು ಬಿಟ್ಟಿದೆ. ಗುರುವಾರ ರಾತ್ರಿ ಕೆರೆಯಿಂದ ತೆರಳಿದ ಕಾಡಾನೆಗಳು ಮಾರ್ಗ ಮಧ್ಯೆ ಸಿಗುವ ಮಾಚನಹಳ್ಳಿ ಕಾಲೋನಿ, ಕಂಬಾಳು, ವೀರಸಾಗರ, ಗೆದ್ದಲಹಳ್ಳಿ, ಶ್ರೀಪತಿಹಳ್ಳಿ, ವೀರಪ್ಪನಪಾಳ್ಯ, ನಾರಾಯಣಪುರ ಗ್ರಾಮಗಳಲ್ಲಿರುವ ರೈತರ ಬೆಳೆಗಳಾದ ಭತ್ತದ ಮೆದೆ, ರಾಗಿ ಬಣವೆ, ಅವರೆ, ತೊಗರಿ, ತೆಂಗು, ಅಡಕೆ, ವಾಣಿಜ್ಯ ಬೆಲೆಗಳನ್ನು ಹಾಳು ಮಾಡಿದ್ದು ರೈತರ ಲಕ್ಷಾಂತರ ಮೌಲ್ಯದ ಬೆಳೆ ಹಾನಿಯಾಗಿದೆ. ಅರಣ್ಯಾಧಿಕಾರಿಗಲ ನಿರ್ಲಕ್ಷದಿಂದ ಮತ್ತಷ್ಟು ರೈತರ ಬೆಳೆಗಳು ಹಾನಿಯಾಗುತ್ತಲೆ ಇರುತ್ತವೆ. ಇದನ್ನು ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಲು ಸಂಪೂರ್ಣ ವಿಫಲರಾಗಿದ್ದಾರೆ. ನಮ್ಮನ್ನು ರಕ್ಷಿಸಲು ಯಾರು ಮುಂದಾಗುತ್ತಿಲ್ಲ ಎಂದು ಬಡ ರೈತರು ತಮ್ಮ ನೋವು ತೊಡಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಅವರ ಬಳಿ ಬಂದು ಕಾಡಾನೆಗಳು ಮತ್ತು ಚಿರತೆ ಹಾವಳಿಯಿಂದ ತಮ್ಮನ್ನು ರಕ್ಷಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement