ಉದ್ಯಮಿಗಳೇ ವಂತಿಗೆ ನೀಡಬೇಡಿ: ದಯಾನಂದ
ಆನೇಕಲ್ಲು: ಕೈಗಾರಿಕಾ ಮಾಲೀಕರ ಸಂಘ ತನ್ನ ಸದಸ್ಯರ ಏಳಿಗೆ ಹಾಗೂ ಭದ್ರತೆಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಯಾವುದೇ ಮಾಲೀಕರು ಸಂಘ ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗೆ ಅನಾವಶ್ಯಕ ವಂತಿಗೆ ನೀಡಬಾರದೆಂದು ಕೈಗಾರಿಕಾ ಮಾಲಿಕರ ಸಂಘದ ಅಧ್ಯಕ್ಷ ಹಾಗೂ ಮೇಲ್ಮನೆ ಸದಸ್ಯ ಬಿ.ಟಿ. ದಯಾನಂದ ಮನವಿ ಮಾಡಿದ್ದಾರೆ.
ಅವರು ಸಂಘದ ನೂತನ ಡೈರಿಯನ್ನು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್ ಹಾಗೂ ಡಿವೈಎಸ್ಪಿ ಬಲರಾಮೇಗೌಡರ ಸಹಯೋಗದಲ್ಲಿ ಬಿಡುಗಡೆ ಮಾಡಿ ಮಾತನಾಡಿ ಜಾಗತಿಕ ಸ್ಪರ್ಧೆಯಲ್ಲಿ ಕೈಗಾರಿಕ ಮುಂದವರಿಸಿಕೊಂಡು ಹೋಗುವುದೇ ಸವಾಲಾಗಿರುವ ಸಂದರ್ಭದಲ್ಲಿ ಮಾಲೀಕರು ತಮ್ಮ ಭವಿಷ್ಯ ಹಾಗೂ ಕಾರ್ಮಿಕರ ಭವಿಷ್ಯ ರೂಪಿಸಲು ಹೆಣಗಬೇಕಿದೆ ಎಂದು ತೊಂದರೆ ಬಗ್ಗೆ ವಿವರಿಸಿದರು.
ರಮೇಶ್ ಅಭಯ: ಕಾರ್ಮಿಕರು ಹಾಗೂ ಕೈಗಾರಿಕಾ ಮಾಲಿಕರ ಸಮಸ್ಯೆಗಳನ್ನು ಆಲಿಸಿದ ಎಸ್‌ಪಿ ಬಿ. ರಮೇಶ್ ಮಾತನಾಡಿ, ಯಾವುದೇ ವ್ಯಕ್ತಿ ಹಾಗೂ ಸಂಘಟನೆಗಳಿಂದ ಹಫ್ತಾ ಅಥವಾ ವಂತಿಗೆಗಾಗಿ ಅನವಶ್ಯಕ ಬೇಡಿಕೆ ಬಂದಲ್ಲಿ ಹತ್ತಿರದ ಪೊಲೀಸ ಠಾಣೆಗೆ ದೂರು ನೀಡಿ ಎಂದು ಸಲಹೆ ನೀಡಿದರು.
ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ಮಾಲಿಕರ ಸಂಘದ ಪದಾಧಿಕಾರಿಗಳು, ವೃತ್ತ ನಿರೀಕ್ಷಕ ಕಿಶೋರ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.