ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಿಶ್ರ ಪೋಷಕಾಂಶದಿಂದ ಅಧಿಕ ಇಳುವರಿ

Mainashree
Updated On : 4 Jan 2014, 12:17 pm

ನೆಲಮಂಗಲ: ರೈತರು ಮಣ್ಣಿನ ಫಲವತ್ತತೆ ಮತ್ತು ಮಾದರಿಗಳನ್ನು ಪರೀಕ್ಷಿಸಿಕೊಳ್ಳುವ ಮೂಲಕ ಸಮತೋಲನ ಪೋಷಕಾಂಶ ಬಳಸಿ ಹೆಚ್ಚಿನ ಇಳುವರಿ ಪಡೆಯುವಂತೆ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಡಾ.ನವೀನ್ ತಿಳಿಸಿದರು.
ಅವರು ಶುಕ್ರವಾರ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ರೈತರ ದಿನಾಚರಣೆ ಮತ್ತು ಭೂಚೇತನ ಯೋಜನೆ ಅಡಿಯಲ್ಲಿ  ಬೆಳೆದ ರಾಗಿ ಬೆಳೆಯ ತಾಲೂಕು ಮಟ್ಟದ ಕ್ಷೇತ್ರೋತ್ಸವ ಹಾಗೂ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಾ ಎಲ್ಲಾ ಬೆಳೆಗಳ ಬಗ್ಗೆ ಅನುಸರಿಸಬೇಕಾದ ಸುಧಾರಿತ ಸಾಗುವಳಿ ಕ್ರಮಗಳು ಮತ್ತು ಹೊಸ ಹೊಸದಾಗಿ ಆವಿಷ್ಕಾರ ಹೊಂದಿರುವ ವಿಜ್ಞಾನ ವಿಚಾರದ ಬಗ್ಗೆ ತರಬೇತಿಯನ್ನು ರೈತರಿಗೆ ನೀಡಿದರು.
ದೇಶಕ್ಕೆ ಅನ್ನ ನೀಡುತ್ತಿರುವ ರೈತರು ಕೃಷಿಯಲ್ಲಿ ಖರ್ಚುಗಳನ್ನು ಕಡಿಮೆಗೊಳಿಸಿ, ಹೆಚ್ಚಿನ ಹಾಗೂ ಸುಸ್ಥಿರ ಉತ್ಪನ್ನ ಗಳಿಸಲು, ಸುಧಾರಿತ ಹೊಸ ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳಲು ಡಾ.ಉಮೇಶ್ ಚಂದ್ರಬ್ಯಾನರ್ಜಿ ಕರೆ ನೀಡಿದರು
ಕ್ಷೇತ್ರೋತ್ಸವದಲ್ಲಿ ಮಹದೇವಪುರದ ರೈತ ತನ್ನ ಜಮೀನಿನಲ್ಲಿ ಬೆಳೆದ ಇಂಡಾಪ್ 7 ರಾಗಿಯನ್ನು ಅತ್ಯುತ್ತಮವಾಗಿ ಬೆಳೆದಿದ್ದ ಅಚ್ಚ ಹಸಿರಿನ ತೆನೆಗಳಿಂದ ಕಂಗೊಳಿಸುತ್ತಿದ್ದ ರಾಗಿಯನ್ನು ಅಧಿಕಾರಿಗಳು ವೀಕ್ಷಿಸಿ ರೈತ ಮಲ್ಲಿಕಾರ್ಜುನ ಸ್ವಾಮಿಗೆ ಅಭಿನಂದಿಸಿರು. ಕೃಷಿ ಉತ್ಪನ್ನ ವಸ್ತು ಪ್ರದರ್ಶನದಲ್ಲಿ ವಿವಿಧ ತಾಂತ್ರಿಕತೆಗಳ ಮಾಹಿತಿ, ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಸೊಪ್ಪು, ತರಕಾರಿ, ಪುಷ್ಪ, ಹಣ್ಣು ಮತ್ತು ಬೆಳೆಗಳ ಜೈವಿಕ ಮಾದರಿಗಳನ್ನು ಮತ್ತು ಕೃಷಿಯಲ್ಲಿ ಬಳಸುವ ಸುಧಾರಿತ ಯಂತ್ರೋಪಕರಣಗಳನ್ನು ಪ್ರದರ್ಶಿಸಿದರು.
ತಾಪಂ ಅಧ್ಯಕ್ಷೆ ಸರಸ್ವತಮ್ಮ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿ ಪರ ರೈತರಾದ ಮಾಚನಾಯಕನಹಳ್ಳಿ ಶ್ರೀಧರ್, ಮಹದೇವಪುರ ಮಲ್ಲಿಕಾರ್ಜುನಸ್ವಾಮಿ, ಮದಲಕೋಟೆ ಹನುಮಂತರಾಯ ಅವರನ್ನು ಯಂಟಗಾನಹಳ್ಳಿ ಗ್ರಾಪಂಅಧ್ಯಕ್ಷ ಸುರೇಶ್ ಮತ್ತಿತರರು ಸನ್ಮಾನಿಸಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಿದ್ದಪ್ಪ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ.ಹನುಮಂತರಾಜು, ಡಾ.ಮಂಜಪ್ಪ, ಸುಶೀಲದೇವಿ, ಸಹಾಯಕ ನಿರ್ದೇಶಕ  ಡಾ.ರಾಮಮೂರ್ತಿ ಸೇರಿದಂತೆ ಪಶುಸಂಗೋಪನಾ ಇಲಾಖೆ, ಜಲಾನಯನ ಇಲಾಖೆ ಅಧಿಕಾರಿಗಳು ಹಾಗೂ ನೂರಾರು ಜನ ರೈತರು ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement