ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಸ್ತೆ ಬದಿ ಹಳ್ಳಕ್ಕೆ ಬಿದ್ದ ಸಾರಿಗೆ ಬಸ್

Mainashree
Updated On : 4 Jan 2014, 12:17 pm

ನೆಲಮಂಗಲ: ಸರ್ಕಾರಿ ಬಸ್ಸೊಂದು ಚಲಿಸುತ್ತಿದ್ದಾಗ ಹೆದ್ದಾರಿ ರಸ್ತೆಯಲ್ಲಿ ಬಂದ ಸೈಕಲ್ ಸವಾರನನ್ನು ಉಳಿಸಲು ಹೋದ ಚಾಲಕ ಬಸ್ ಅನ್ನು ರಸ್ತೆ ಬದಿಯ ಹಳ್ಳಕ್ಕೆ ಉರುಳಿಸಿರುವ ಘಟನೆ ದಾಬಸ್‌ಪೇಟೆಯ ಅಂಚೆಮನೆ ಕ್ರಾಸ್‌ನಲ್ಲಿ ಶುಕ್ರವಾರ ನಡೆದಿದೆ.
ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಸ್ಸನ್ನು ನಿಯಂತ್ರಣಕ್ಕೆ ತಂದರೂ ಬಸ್ ರಸ್ತೆಯ ಎಡ ಬದಿಗೆ ಸಂಪೂರ್ಣವಾಗಿ ವಾಲಿಕೊಂಡು ನಿಧಾನವಾಗಿ ಉರುಳಿ ಬಿದ್ದಿದೆ.  
 ಒಂದು ವೇಳೆ ಅತೀ ವೇಗವಾಗಿಯೇ ಉರುಳಿ ಬಿದ್ದಿದ್ದರೆ ಸಾಕಷ್ಟು ಪ್ರಾಣ ಹಾನಿ ಸಂಭವಿಸುತ್ತಿತ್ತು. ಈ ಘಟನೆಯಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 26 ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಕೆಎಸ್‌ಆರ್‌ಟಿಸಿ ಬಸ್ ಶಿರಾ ಡಿಪೋಗೆ ಸೇರಿದ್ದು ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುತ್ತಿತ್ತು. ಗಾಯಗೊಂಡವರನ್ನು ಬ್ಯಾಡಗಿಯ ಬಸವರಾಜು, ಹಗರಿ ಬೊಮ್ಮನಹಳ್ಳಿಯ ರವಿಚಂದ್ರ, ಚಿತ್ರದುರ್ಗದ ನರೇಶ, ದಾವಣಗೆರೆಯ ಬಿ.ಎಂ.ಸುಬ್ಬಣ್ಣ, ಪ್ರದೀಪ, ಹರೀಶ, ತುಮಕೂರಿನ ಪ್ರಕಾಶ ಹಾಗೂ ಬಸ್ ಚಾಲಕ ಮಹೇಶ್ ಪೂಜಾರ ನಿರ್ವಾಹಕ ಅಜೀಜ್ ಗಾಯಗೊಂಡಿದ್ದಾರೆ.
ಗಾಯಾಳುಗಳು ಸ್ಥಳೀಯ ಆಸ್ಪತ್ರೆ ಸೇರಿದಂತೆ ನೆಲಮಂಗಲ ತುಮಕೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಸೈಕಲ್ ಸವಾರನಾದ ಸುಬ್ಬಣ್ಣ ತೀವ್ರವಾಗಿ ಗಾಯಗೊಂಡು ತುಮಕೂರಿನ ಸಕಾಂರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
  ಈ ಸ್ಥಳ ಅತೀ ಅಪಾಯಕಾರಿಯಾಗಿದ್ದು ಇದೇ ಸ್ಥಳದಲ್ಲಿ ಸಾಕಷ್ಟು ದ್ವಿಚಕ್ರ ವಾಹನಗಳು ಸೇರಿದಂತೆ ಲಾರಿ ಮತ್ತು ಪಾದಚಾರಿಗಳಿಗೆ ಅಪಘಾತವಾಗಿ ಸಾಕಷ್ಟು ಪ್ರಾಮ ಹಾನಿಯಾಗಿದೆ.
ಸ್ಥಳೀಯರ ಆಕ್ರೋಶ: ರಸ್ತೆ ತಿರುವು ರದ್ದು ಗೊಳಿಸಿದರೆ ಮತ್ತಷ್ಟು ಅಪಘಾತಗಳನ್ನು ತಡೆಯಬಹುದು ಈ ಬಗ್ಗೆ ರಸ್ತೆ ಪ್ರಾಧಿಕಾಪದ ಅಧಿಕಾರಿಗಳು ಮತ್ತು ರಸ್ತೆ ನಿರ್ವಹಣೆಯ ಹೊಣೆ ಹೊತ್ತಿರುವ ಜಾಸ್‌ಟೋಲ್ ಸಂಸ್ಥೆಯವರು ಶೀಘ್ರವಾಗಿ ರಸ್ತೆ ತಿರುವನ್ನು ಮುಚ್ಚಿಸಬೇಕೆಂದು ಇಲ್ಲಿನ ಸ್ಥಳೀಯ ಜನರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement