ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಿರಂತರ ಕುಡಿವ ನೀರು ಪೂರೈಕೆಗೆ ಸೂಕ್ತ ಕ್ರಮ: ಮುದ್ದುರಾಜ್ ಯಾದವ್

Mainashree
Updated On : 4 Jan 2014, 11:59 am

ಮಾಗಡಿ: ಗ್ರಾಮೀಣ ಪ್ರದೇಶದ ಜನತೆಗೆ  ನಿರಂತರ ಕುಡಿಯುವ ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ. ಮುದ್ದುರಾಜ ಯಾದವ್ ನುಡಿದರು. ಅವರು ಮಾಗಡಿ ತಾಲೂಕಿನ ಹನುಮಾಪುರದ ಗ್ರಾಮದಲ್ಲಿ ಸುಮಾರು 16 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ಸುಸಜ್ಜಿತ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು, ಪ್ರಧಾನ ಮಂತ್ರಿ ಕುಡಿಯುವ ಶುದ್ಧ ನೀರನ್ನೇ ಸಾಮಾನ್ಯ ಜನರು ಕುಡಿಯಬೇಕು ಎಂಬ ಮಹತ್ವಾಕಾಂಕ್ಷೆ ಚಿಂತನೆಯಿಂದ ಉತ್ತಮ ರೀತಿಯಲ್ಲಿ ಓವರ್ ಹೆಡ್  ಟ್ಯಾಂಕ್ ನಿರ್ಮಿಸಲು ಅಗತ್ಯ ಕ್ರಮ ಕೈಗೊಂಡಿದ್ದೇನೆ. ಕಾಮಗಾರಿಯಲ್ಲಿಯೂ ಗುಣಮಟ್ಟ ಕಾಪಾಡಿಕೊಂಡು ಬರಲು ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಬೇಸಿಗೆ ಕಾಲ ಸಮೀಸುತ್ತಿರುವುದರಿಂದ ಆದಷ್ಟು  ತ್ವರಿತಗತಿಯಲ್ಲಿ ಕಾಮಗಾರಿ ಆರಂಭಿಸಿ, ಕುಡಿಯುವ ನೀರಿಗೆ ಅಗತ್ಯ ಕ್ರಮ ವಹಿಸಲಾಗಿದೆ ಎಂದರು.    ತಾ.ಪಂ. ಸದಸ್ಯೆ ಅರುಂಧತಿ ಚಿಕ್ಕಣ್ಣ ಮಾತನಾಡಿ  ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಜಿಲ್ಲಾ ಪಂಚಾಯ್ತಿ ವತಿಯಿಂದ 16 ಲಕ್ಷ ರು. ಮಂಜೂರಾಗಿದೆ.  ನಿರಂತರವಾಗಿ ಕುಡಿಯುವ ನೀರು ಪೂರೈಕೆಗೆ ಹನುಮಾಪುರದಲ್ಲಿ ನೂತನ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಯೋಜನೆ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.    ಟ್ಯಾಂಕ್ ನಿರ್ಮಾಣಕ್ಕೆ ಭೂಮಿ ನೀಡಿರುವ ದಾನಿ ಯಲವಯ್ಯ, ಗ್ರಾ.ಪಂ. ಸದಸ್ಯ ಅರುಣ್‌ಕುಮಾರ್, ನಿವೃತ್ತ ರೆವಿನ್ಯೂ ಇನ್ಸ್‌ಪೆಕ್ಟರ್ ರಾಮಯ್ಯ, ಸೋಮಶೇಖರ್, ಮಾರೇಗೌಡ, ರಂಗಸ್ವಾಮಯ್ಯ, ರಾಜಣ್ಣ, ಕಲ್ಯ ಗ್ರಾ.ಪಂ.ಅಧ್ಯಕ್ಷ ಬಿ.ಕೆ. ಕುಮಾರ್, ಸದಸ್ಯೆ ಸಿದ್ದಮ್ಮ, ಮಲ್ಲಿಕಾರ್ಜುನಸ್ವಾಮಿ, ಎಂಜಿನಿಯರ್ ಮಹೇಶ್ ಇತರೆ ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement