ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಕ್ಕಳು ಶ್ರಮವಹಿಸಿ ವಿದ್ಯೆ ಒಲಿಸಿಕೊಳ್ಳಲಿ: ಪುಟ್ಟರುದ್ರರಾಧ್ಯ

Mainashree
Updated On : 4 Jan 2014, 11:59 am

ನೆಲಮಂಗಲ: ಜಗತ್ತಿನಲ್ಲಿ  ಶಿಕ್ಷಣ ಕ್ಷೇತ್ರದಲ್ಲಿ  ಹೆಚ್ಚಿನ ಸ್ಪರ್ಧೆ ಇರುವುದರಿಂದ ಮಕ್ಕಳು ಶ್ರಮವಹಿಸಿ ವಿದ್ಯೆಯನ್ನು ಒಲಿಸಿಕೊಳ್ಳಬೇಕು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಪುಟ್ಟರುದ್ರಾರಾಧ್ಯ ತಿಳಿಸಿದರು.
ಅವರು ಶನಿವಾರ ತಾಲೂಕಿನ ಹಳೆನಿಜಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಶಾಲಾ ಮಕ್ಕಳಿಗೆ ನೋಟ್‌ಪುಸ್ತಕ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ವಿದ್ಯೆ ಸಾಧಕನ ಸೊತ್ತಾಗುವುದೇ ವಿನಃ ಸೋಮಾರಿಗಳ ಸ್ವತ್ತಾಗುವುದಿಲ್ಲ. ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಸಾಕಷ್ಟು ಮಂದಿ ದಾನಿಗಳು ಸೇರಿದಂತೆ ಸರ್ಕಾರ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ಶಾಲೆಗಳಿಗೆ ನೀಡುತ್ತಿದೆ. ಇದರ ಉಪಯೋಗವನ್ನು ಸೂಕ್ತವಾಗಿಯೇ ಬಳಸಿಕೊಂಡು ದೇಶಕ್ಕೆ ಕೊಡುಗೆ ನೀಡಿ ಎಂದರು. ಸಿ.ಆರ್.ಪಿ.ಸಿದ್ದರಾಮೇಗೌಡ ಮಾತನಾಡಿ, ಮಕ್ಕಳು ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದಬೇಕು. ಜೀವನದಲ್ಲಿ ಸಮಯ ಅತ್ಯಅಮೂಲ್ಯವಾದದ್ದು. ಅದನ್ನು  ಸದುಪಯೋಗಪಡಿಸಿಕೊಂಡು  ಉತ್ತಮ ವಿದ್ಯಾರ್ಥಿಗಳಾಗಿ,   ಸಮಾಜ ಮುಖಿಯಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
 ಮುಖ್ಯ ಶಿಕ್ಷಕ ವೀರಮಲ್ಲಯ್ಯ, ಶಂಕರ್, ತೋಂಟಾರಾಧ್ಯ, ಎನ್.ಆರ್.ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement