ಯಾದವ ಸಂಘಟನೆಗೆ ಆದ್ಯತೆ: ಹರೀಶ್
ಆನೇಕಲು: ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆ ಇರುವ ಯಾದವ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಯುವ ಘಟಕದ ರಾಜ್ಯ ಸಂಚಾಲಕ ಅಮ್ಮನಹಟ್ಟಿ ಹರೀಶ ಆಗ್ರಹಿಸಿದ್ದಾರೆ. ಸಚಿವರಾದ ಆಂಜನೇಯ ಅವರು ಪ್ರತಿ ಜಿಲ್ಲೆಗೆ 10 ರಂತೆ ಪ್ರಸಕ್ತ ಸಾಲಿಗೆ 100 ಇಂದಿರಾ ಭವನ ನಿರ್ಮಾಣಕ್ಕೆ ರು. 25 ಕೋಟಿ ಘೋಷಿಸಿರುವುದು ಸ್ವಾಗತಾರ್ಹ. ಚುನಾವಣೆಗೆ ಮೊದಲೇ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಕೋರಿದರು. ಯಾದವ ಕುಲಸ್ಥರ ಸಂಘಟನೆಗಾಗಿ ಯುವ, ಮಹಿಳಾ ಹಾಗೂ ಕಾರ್ಮಿಕ ಘಟಕಗಳನ್ನು ಪ್ರತಿ ತಾಲೂಕಿಗೂ ಸಂಚರಿಸಿ ಸಂಘಟನೆ ಮಾಡಿ ನೇಮಕ ಮಾಡಲಾಗುವುದು. ಯುವ ಶಕ್ತಿಯ ಸಹಕಾರದಿಂದ ಸಮಾಜ ಮುಖಿ ಕಾರ್ಯಕ್ರಮಗಳಾದ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ನಡೆಸಿ ನಾಡು ನುಡಿಯ ಹಿತ ರಕ್ಷಣೆಗಾಗಿ ಹೋರಾಟ ಮಾಡಲು ಬದ್ಧ ಎಂದರು. ಬೆಂಗಳೂರು ಹೊರವಲಯದಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ರಾಜ್ಯದ ಎಲ್ಲ ಭಾಗದ ಜನತೆ ವಾಸಿಸುತ್ತಿದ್ದು ಸನಿಹದಲ್ಲೇ ಜನಾಂಗದ ಬೃಹತ್ ಸಮಾವೇಶ ನಡೆಸಲಾಗುವುದು ಎಂದರು. ಮಂಜುನಾಥ ಯಾದವ್, ಮಹಾಲಿಂಗಯಾದವ್, ನಿಂಗರಾಜ, ಶಂಕರ್ ಯಾದವ್ ಜತೆಗಿದ್ದರು.