ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹೊಸಕೋಟೆಯಲ್ಲಿ ಶೇ. 88 ಹಕ್ಕು ಚಲಾವಣೆ

Mainashree
Updated On : 6 Jan 2014, 12:43 pm

ಹೊಸಕೋಟೆ : ಒಕ್ಕಲಿಗರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ.88ರಷ್ಟು ಮತದಾನ ದಾಖಲಾಗಿದೆ. ಪಟ್ಟಣದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ 5850 ಸದಸ್ಯರಲಿ 5130 ಮತ ಚಲಾವಣೆಗೊಂಡಿದೆ. ತಾಲೂಕಿನಲ್ಲಿ ಸುಮಾರು 6150 ಮತದಾರರಿದ್ದು ಮಲ್ಲಸಂದ್ರ, ಸಮ್ಮೇತನಹಳ್ಳಿ ಗ್ರಾಮಗಳನ್ನು ನಗರ ಪ್ರದೇಶಕ್ಕೆ ಸೇರ್ಪಡೆ ಮಾಡಿದ್ದ ಪ್ರಯುಕ್ತ ಐಟಿಐ ಮತಕೇಂದ್ರಕ್ಕೆ ವರ್ಗಾಯಿಸಲ್ಪಟ್ಟಿತ್ತು.
ಹೆಸರಿಲ್ಲದೆ ನಿರಾಸೆ: ಸಂಘದ ಸದಸ್ಯರಾಗಿದ್ದು ಗುರುತಿನ ಪತ್ರ ಹೊಂದಿದ್ದರೂ ಸಹ ಮತಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಸುಮಾರು 30 ಸದಸ್ಯರು ಮತ ಚಲಾವಣೆ ಮಾಡಲು ಸಾಧ್ಯವಾಗದೆ ನಿರಾಸೆಗೊಂಡರು. ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ, ಮಾಲೂರು ಶಾಸಕ ಕೆ.ಎಸ್.ಮಂಜುನಾಥಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಸೊಣ್ಣಪ್ಪ, ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಚುನಾವಣಾ ಸ್ಪರ್ಧಿ ಸಿ.ಮಂಜುನಾಥ್ ಮತ ಚಲಾವಣೆ ಮಾಡಿದವರಲ್ಲಿ ಪ್ರಮುಖರು. ಬೆಳಿಗ್ಗೆ 8 ಗಂಟೆಗೆ ಮತದಾನ ಪ್ರಾರಂಭಗೊಂಡಿದ್ದು ಬಿರುಸಿನಿಂದಲೇ ನಡೆದು ಮತಕೇಂದ್ರದ ಮುಂಭಾಗ ಸ್ಪರ್ಧಿಗಳ ನೂರಾರು ಬೆಂಬಲಿಗರು ಮತಯಾಚನೆಯಲ್ಲಿ ತೊಡಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement