ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆರ್. ಬಚ್ಚೇಗೌಡ ಚಿರಸ್ಮರಣೆ ಕಾರ್ಯಕ್ರಮ

Vishwanath S
Updated On : 8 Jan 2014, 1:03 am

ವಿಜಯಪುರ: ರಾಜಕೀಯ ರಂಗದಲ್ಲಿ ಧೀಮಂತ ವ್ಯಕ್ತಿಯಾಗಿದ್ದ ಆರ್. ಬಚ್ಚೇಗೌಡ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಮುಖಂಡತ್ವ ಹಾಗೂ ಯಾವುದೇ ಸಂದರ್ಭದಲ್ಲೂ ಕಾರ್ಯಕರ್ತರಿಗೆ ಸ್ಪಂದಿಸುವ ವ್ಯಕ್ತಿಯಾಗಿದ್ದರು ಎಂದು ಮಾಜಿ ಶಾಸಕ ಮುನಿನರಸಿಂಹಯ್ಯ ತಿಳಿಸಿದರು.
ಅವರು ಪಟ್ಟಣದ ಪುರಭವನದಲ್ಲಿ ಆರ್. ಬಚ್ಚೇಗೌಡರ ಚಿರಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕೆ.ಎಂ.ಎಫ್‌ನಲ್ಲಿ ಅಧ್ಯಕ್ಷರಾಗಿದ್ದ ವೇಳೆಯಲ್ಲಿ ಹೈನುಗಾರಿಕೆಗೆ ಉಪಯುಕ್ತವಾಗುವ ಸಾಕಷ್ಟು ಅನುಕೂಲಗಳನ್ನು ಹಾಲು ಉತ್ಪಾದಕರಿಗೆ ಮಾಡಿಕೊಟ್ಟಿದ್ದರು. ಜೊತೆಗೆ ಪಕ್ಷದ ಒಬ್ಬ ಸಕ್ರಿಯ ಕಾರ್ಯಕರ್ತನಾಗಿ ಉತ್ತಮ ಸಂಘಟಕರಾಗಿದ್ದರು ಎಂದರು.
ಇದೇ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ. ಸತೀಶ್ ಕುಮಾರ್  ಮಾತನಾಡಿ ತಾಲೂಕು ಹಾಗೂ ಸುತ್ತಮುತ್ತಲ ಪಕ್ಷದ ಕಾರ್ಯಕರ್ತರಿಗೆ ದಾರಿ ದೀಪವಾಗಿದ್ದ ಆರ್. ಬಚ್ಚೇಗೌಡರು ಆಧ್ಯಾತ್ಮಿಕ ಹಾಗೂ ಧಾರ್ಮಿಕ ಚಿಂತಕರಾಗಿದ್ದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಮಕ್ಕಳು ಉತ್ತಮ ಸಾಧನೆ ಮಾಡಬೇಕು ಎನ್ನುವ ದೃಷ್ಟಿಯಿಂದ ನಂದಿನಿ ವಿದ್ಯಾನಿಕೇತನ್ ಸಂಸ್ಥೆಯನ್ನು ಪ್ರಾರಂಭಿಸಿ ಗ್ರಾಮೀಣ ಮಕ್ಕಳು ನಗರ ಮಕ್ಕಳಿಗಿಂತ ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ಶಿಕ್ಷಣ ನೀಡುತ್ತಿದ್ದರು. ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ ಮಾತನಾಡಿ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಈ ಸಂದರ್ಭದಲ್ಲಿ ಹಾರೋಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ರಾಜಗೋಪಾಲ್, ನಂದಿನಿ ವಿದ್ಯಾನಿಕೇತನ್ ಶಾಲೆಯ ಆಡಳಿತಾಧಿಕಾರಿ ಚೇತನ್ ಬಚ್ಚೇಗೌಡ, ಕೃಷಿಕ ಸಮಾಜದ ಅಧ್ಯಕ್ಷ ಶ್ರೀನಿವಾಸ್ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರಕುಮಾರ್ ಮಾತನಾಡಿದರು. ಎಸ್‌ಇ, ಎಸ್‌ಟಿ ಘಟಕದ ಅಧ್ಯಕ್ಷ ಚಿನ್ನಪ್ಪ, ಎ.ವಿ.ನಾರಾಯಣಸ್ವಾಮಿ, ಪುರಸಭಾ ಸದಸ್ಯರಾದ ಭಾರತಿ ಮುನಿಕೃಷ್ಣಪ್ಪ,ಶ್ರೀನಿವಾಸ್, ರಾಜ್‌ಗೋಪಾಲ್, ವರದರಾಜು, ಗೀತ ರಾಮಚಂದ್ರಪ್ಪ, ಮೆಹಬೂಬ್ ಪಾಷ, ವಿಜಯಕುಮಾರ್, ಮುನಿಚಿನ್ನಪ್ಪ, ಮಾಜಿ ಸದಸ್ಯರಾದ ಮುನಿರಾಜು, ವೀರಣ್ಣಗೌಡ, ಕೇಶವ ನಾರಾಯಣ, ಮುನಿಶ್ಯಾಮಪ್ಪ, ಮುನಿರಾಜು ಹಾಗೂ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement