ಗ್ರಾಮೀಣ ಜನತೆಗೆ ಕುಡಿಯುವ ನೀರು ಪೂರೈಕೆಗೆ ಸೂಕ್ತ ಕ್ರಮ
ಮಾಗಡಿ: ಗ್ರಾಮೀಣ ಭಾಗದ ಜನತೆಗೆ ಅಗತ್ಯ ಕುಡಿಯುವ ನೀರಿನ ಪೂರೈಕೆಗೆ ಸೂಕ್ತ ಕ್ರಮ ಕೈಗೊಂಡಿದ್ದೇನೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಮುದ್ದುರಾಜ ಯಾದವ್ ನುಡಿದರು. ಅವರು ತಾಲೂಕಿನ ಜೋಗಿಪಾಳ್ಯದ ಬಳಿ ಸುಮಾರು 16 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ಸುಸಜ್ಜಿತ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು, ನಗರ, ಪಟ್ಟಣ, ಗ್ರಾಮೀಣ ಎಂಬ ಭೇದ ಭಾವವಿರಬಾರದುಎಂದರು.
ಹನಿ ನೀರು ಅತ್ಯಾಮೂಲ್ಯವಾದುದು, ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಜಿಲ್ಲಾ ಪಂಚಾಯ್ತಿ ವತಿಯಿಂದ 16 ಲಕ್ಷ ರು. ಮಂಜೂರಾಗಿದೆ. ಗ್ರಾಮೀಣ ಜನತೆಗೆ ಅಗತ್ಯ ಕುಡಿಯುವ ನೀರು ಪೂರೈಕೆ ಸದ್ಬಳಕೆಯಾಗಬೇಕು ಎಂದರು. ಜಿ.ಪಂ. ಸದಸ್ಯ ವಿಜಯಕುಮಾರ್, ಗ್ರಾ.ಪಂ. ಸದಸ್ಯ ಮಂಜುನಾಥ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕಾಂತರಾಜು, ರಾಜಣ್ಣ, ವೆಂಕಟೇಶ್, ತಗ್ಗೀಕುಪ್ಪೆ ಗ್ರಾ.ಪಂ. ಪಿಡಿಓ ವಿರುಪಾಕ್ಷಯ್ಯ, ಎಇ ಗುರುಶಂಕರ್, ಶ್ರೀನಿವಾಸಯ್ಯ, ಗುತ್ತಿಗೆದಾರ ರೇಣುಕಪ್ಪ, ಮೂರ್ತಿ, ಮುಪ್ತಿಹಾರ್ ಅಹಮದ್ ಇತರರು ಇದ್ದರು.