ಲಯನ್ಸ್ನಿಂದ 191ನೇ ಮಾಸಿಕ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ
ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಕ್ಲಬ್ ನೇತೃತ್ವದಲ್ಲಿ 191ನೇ ಮಾಸಿಕ ಉಚಿತ ಕಣ್ಣಿನ ತಪಾಸಣೆ ಮತ್ತು ಆಧುನಿಕ ಶಸ್ತ್ರಚಿಕಿತ್ಸೆ ಮೂಲಕ ಐಓಎಲ್ ಅಳವಡಿಕೆ ಶಿಬಿರ ಸೋಮವಾರ ಲಯನ್ಸ್ ಭವನದಲ್ಲಿ ನಡೆಯಿತು.
ಪಿಎಂಜೆಎಫ್ ಲಕ್ಷ್ಮೀದೇವಿ ಎನ್. ಪ್ರಧಾನ್ ಶಿಬಿರವನ್ನು ಉದ್ಘಾಟಿಸಿದರು.
ದೊಡ್ಡಬೆಳವಂಗಲ ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಬಿ.ಶಿವಾನಂದಪ್ಪ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ವಿ.ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. 60ಕ್ಕೂ ಹೆಚ್ಚು ರೋಗಿಗಳನ್ನು ಐಓಎಲ್ ಚಿಕಿತ್ಸೆಗೆ ಆಯ್ಕೆ ಮಾಡಿಕೊಳ್ಳಲಾಯಿತು.
ಶಿಬಿರವನ್ನು ಲಕ್ಷ್ಮೀದೇವಿ ಎನ್.ಪ್ರಧಾನ್ ಪ್ರಾಯೋಜಿಸಿದ್ದರು.
ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಪಶ್ಚಿಮ ಲಯನ್ಸ್ ಕಣ್ಣಾಸ್ಪತ್ರೆ ಮತ್ತು ಅಕ್ಷಿ ಜೋಡಣಾ ಸಂಸ್ಥೆ, ದೊಡ್ಡಬಳ್ಳಾಪುರ ಲಯನೆಸ್ ಕ್ಲಬ್ ಮತ್ತು ಲಯನ್ಸ್ ಚಾರಿಟೀಸ್ ಟ್ರಸ್ಟ್ ಸಹಯೋಗ ನೀಡಿದ್ದವು.