ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆನೇಕಲ್ ಜೋಡಿ ರಸ್ತೆ ಕಾಮಗಾರಿಗೆ ಚಾಲನೆ

Vishwanath S
Updated On : 9 Jan 2014, 1:23 am

ಆನೇಕಲ್: ಪಟ್ಟಣದ ದೇವರ ಕೊಂಡಪ್ಪ ವೃತ್ತದಿಂದ ಅತ್ತಿಬೆಲೆ ರಸ್ತೆ, ಶಿವಾಜಿ ವೃತ್ತದಿಂದ ಬನ್ನೇರುಘಟ್ಟ ರಸ್ತೆ, ಹಾಗೂ ಗಾಂಧಿ ವೃತ್ತದಿಂದ ಗುಡ್ಡನಹಳ್ಳಿ ಮಾರ್ಗದ ಅಂದಾಜು ರು. 1.5 ಕೋಟಿ ವೆಚ್ಚದ ಜೋಡಿ ರಸ್ತೆ ಕಾಮಗಾರಿಗೆ ಶಾಸಕ ಬಿ. ಶಿವಣ್ಣ ಚಾಲನೆ ನೀಡಿದರು.
ತಲಾ ರು. 50 ಲಕ್ಷ ವೆಚ್ಚದ ಕಾಮಗಾರಿಯನ್ನು 3 ತಿಂಗಳ ಅವಧಿಯಲ್ಲಿ ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಉತ್ತಮ ರಸ್ತೆ ಅಭಿವೃದ್ಧಿಯ ಸಂಕೇತ ಎಂದ ಅವರು ಜೋಡಿ ರಸ್ತೆ ಮಧ್ಯದಲ್ಲಿ ವಿಭಜಕ ಹಾಗೂ ವಿದ್ಯುತ್ ಕಂಭ ಮತ್ತು ದೀಪಗಳನ್ನು ಅಳವಡಿಸಿ ಅಂದವಾಗಿ ಕಾಣುವಂತೆ  ನೀಲ ನಕ್ಷೆ ಅನುಮೋದನೆಯಾಗಿದೆ. ಕಾಮಗಾರಿ ಅನುಷ್ಠಾನದಲ್ಲಿ ತಡೆ ಬಾರದಿರಲು ವಿದ್ಯುತ್, ಪಿಡಬ್ಲ್ಯೂಡಿ ಹಾಗೂ ಪುರಸಭೆ ಇಲಾಖೆ ಅಧಿಕಾರಿಗಳ ಸಹಕಾರ ಕೋರಲಾಗಿದೆ. ಕಂಬ ಸರಿಸುವಿಕೆ, ಅಡ್ಡ ಬಂದ ಮರ ತೆರವು ಹಾಗೂ ನೀರಿನ ಮತ್ತು ಸ್ಯಾನಿಟರ್ ಪೈಪ್ ಸ್ಥಾನಪಲ್ಲಟ ಬಗ್ಗೆ ಚರ್ಚಿಸಿ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ತಿಳಿಸಲಾಗಿದೆ ಎಂದರು.
ಪುರಸಭಾ ಸದಸ್ಯರಾದ ಪಿ. ಶಂಕರ್ ಕುಮಾರ್, ಅರ್ಜುನ್, ಹೇಮಲತಾ ಸುರೇಶ್, ಅಶ್ವತ್ಥನಾರಾಯಣ, ಕಾಂತರಾಜು, ರೇಣುಕಾ ಮಲ್ಲಿಕಾರ್ಜುನ್, ಮುನಾವರ್, ನರಸಿಂಹರೆಡ್ಡಿ, ಶ್ರೀನಿವಾಸ್ ರಾಜಪ್ಪ, ರಾಜರತ್ನಂ, ಮುಖ್ಯಾಧಿಕಾರಿ ಬಿ.ಎಸ್. ಸುಮಾ,ಹಾಗೂ ಸ್ಥಳೀಯ ಮುಖಂಡರಿದ್ದರು. ಸದಸ್ಯರಾದ ಕೆ. ನಾಗರಾಜು, ಶ್ರೀನಿವಾಸ್ ಜೊತೆಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement