ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬೇಡಿಕೆಗಳ ಕುರಿತು ರೇಲ್ವೆ ಸಚಿವರಿಗೆ ಶಾಸಕ ಶಿವಣ್ಣ ಮನವಿ

Vishwanath S
Updated On : 9 Jan 2014, 1:23 am

ಆನೇಕಲ್: 46 ವರ್ಷಗಳ ಹಳೆಯದಾದ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳು ಕನಿಷ್ಠ 1 ನಿಮಿಷ ನಿಲುಗಡೆಯಾಗಬೇಕು. ರೇಲ್ವೆ ಹಳಿಯಿಂದ ಇನ್ನೊಂದು ಬದಿಗೆ ಹೋಗಲು ಮೇಲ್ಸೇತುವೆ ಮೆಟ್ಟಿಲು ಬೇಕು. ಹೊರ ರಾಜ್ಯ ಹಾಗೂ ದೂರದ ಪ್ರದೇಶಗಳಿಗೆ ತೆರಳಲು ರೇಲ್ವೆ ಟಿಕೆಟ್ ಬುಕಿಂಗ್ ಕೌಂಟರ್ ಬೇಕು. ಮೂಲಭೂತ ಸೌಕರ್ಯಗಳನ್ನು ಉತ್ತಮ ಪಡಿಸಿ ಮೇಲ್ದರ್ಜೆಗೇರಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರೇಲ್ವೆ ಸಚಿವ ಮಲ್ಲಿಕಾರ್ಜುನ ಖಗೆ ಅವರಿಗೆ ಶಾಸಕ ಶಿವಣ್ಣ  ಮನವಿ ಸಲ್ಲಿಸಿದರು.
ಶಾಸಕ ಬಿ. ಶಿವಣ್ಣರವರ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು ಪ್ರಾಂತೀಯ ಅಧಿಕಾರಿಗಳಿಗೆ ಕೂಡಲೇ ಆನೇಕಲ್‌ಗೆ ತೆರಳಿ ಗಡಿ ಕೇಂದ್ರದ ಅಭಿವೃದ್ಧಿಗೆ ಬೇಕಾದ ಅನುಕೂಲತೆಗಳನ್ನು ಪಟ್ಟಿ ಮಾಡಿಕೊಂಡು ಬರಲು ಸೂಚಿಸಿದರು. ಸ್ಥಳದಲ್ಲೇ ಪರಿಹಾರ ನೀಡಬಹುದಾದ ಹಾಗೂ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಬಹುದಾದ ಕಾಮಗಾರಿಗಳ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಲು ಸೂಚಿಸಿದರು.
ಅಧಿಕಾರಿಗಳ ಭೇಟಿ: ಕೇಂದ್ರ ರೇಲ್ವೆ ಮಂತ್ರಿಯವರ ಸೂಚನೆ ಮೇರೆಗೆ ಗುರವಾರ ಬೆಳಗ್ಗೆ ಡಿಆರ್‌ಎಂ ಅಗರವಾಲ್ ಮತ್ತು ಸಿಬ್ಬಂದಿ ಆನೇಕಲ್ ರೈಲು ನಿಲ್ದಾಣಕ್ಕೆ ಭೇಟಿ ನೀಡಲಿದ್ದು ನಿತ್ಯ ಪ್ರಯಾಣಿಕರು ಹಾಗೂ ಸಂಘ ಸಂಸ್ಥೆಗಳ ಸದಸ್ಯರು ಸಲಹೆ ಮತ್ತು ಸೂಚನೆ ನೀಡಬೇಕೆಂದು ಶಾಸಕ ಬಿ. ಶಿವಣ್ಣ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement