ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಲಯನ್ಸ್ ಕ್ಲಬ್‌ನಲ್ಲಿ ಜೀವನ ಶೈಲಿ ಕುರಿತ ಉಪನ್ಯಾಸ

Vishwanath S
Updated On : 9 Jan 2014, 1:23 am

ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಜೀವನ ಶೈಲಿ ಕುರಿತ ಉಪನ್ಯಾಸ ಕಾರ್ಯಕ್ರಮ ಲಯನ್ಸ್ ಭವನದಲ್ಲಿ ಮಂಗಳವಾರ ನಡೆಯಿತು.
ಲಯನ್ ಎಸ್.ಆಂಟೋನಿ ಜೋಸೆಫ್ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಬದುಕಿನ ಉತ್ಸಾಹ ಮತ್ತು ಜೀವನ ಚಿಂತನೆಯನ್ನು ವ್ಯವಸ್ಥಿತವಾಗಿ ರೂಪಿಸಿಕೊಂಡಾಗ ಮಾತ್ರ ಸಮೃದ್ಧ ಜೀವನ ಸಾಧ್ಯ. ಗುರಿ ಮತ್ತು ಆಸಕ್ತಿ, ಚಿಂತನೆ ಮತ್ತು ಆಲೋಚನೆ, ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಬಗ್ಗೆ ಮನಸ್ಸು ಸದಾ ಜಾಗರೂಕವಾಗಿರಬೇಕು. ಭವಿಷ್ಯದ ಆಲೋಚನೆ ಇಲ್ಲದ ಜೀವನ ಕಲೆ ಊಹಿಸಲೂ ಅಸಾಧ್ಯ ಎಂದರು.
ಎಂಎಬಿಎಲ್ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ವಿ.ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಮತ್ತು ಲಯನೆಸ್ ಕ್ಲಬ್ ಪದಾಧಿಕಾರಿಗಳು ಹಾಜರಿದ್ದರು.
ಆಯುರ್ವೇದ ಶಿಬಿರ: ಇದೇ ಸಂದರ್ಭದಲ್ಲಿ 15ನೇ ಮಾಸಿಕ ಆಯುರ್ವೇದ ಮತ್ತು ಹೋಮಿಯೋಪತಿ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ವೆಲ್-ವುಮೆನ್ ಕ್ಯಾಂಪ್ ಕೂಡ ಆಯೋಜನೆಗೊಂಡಿತ್ತು. ಆಯುರ್ವೇದ ಶಿಬಿರದಲ್ಲಿ ಡಾ.ರಾಮಲಿಂಗಯ್ಯ, ಡಾ.ಮುರಳಿಕೃಷ್ಣ, ಪಾಪ್‌ಸ್ಮಿಯರ್ ಶಿಬಿರದಲ್ಲಿ ಡಾ.ಕೆ.ಎಸ್.ಶ್ಯಾಂಪ್ರಸಾದ್,ಡಾ.ಇಂದಿರಾ, ಡಾ.ತೇಜಸ್ವಿ, ಕಾಮೇಶ್ವರಿದೇವಿ ಭಾಗವಹಿಸಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement