ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮಾವೇಶ

Vishwanath S
Updated On : 10 Jan 2014, 1:09 am

ದೇವನಹಳ್ಳಿ: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಕೇಂದ್ರ ಕಾರ್ಮಿಕ ಸಂಘಟನೆಯ ಸಂಯೋಜನೆಯಲ್ಲಿ ಸಮಾವೇಶ ಬುಧವಾರ ಇಲ್ಲಿನ ಗುರುಭವನದಲ್ಲಿ ಆಯೋಜಿಸಲಾಗಿತ್ತು.
ಯುಟಿಯುಸಿ ಉಪಾಧ್ಯಕ್ಷ ಎಂ.ಎನ್. ಶ್ರೀರಾಮ್ ನೇರವೇರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಶಾ ಕಾರ್ಯಕರ್ತೆಯರನ್ನು ಸೇವಾ ಕಾರ್ಯಕರ್ತೆಯರೆಂದು ಭಾವಿಸದೆ ಕಾರ್ಮಿಕರೆಂದು ಪರಿಗಣಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತಾಗಬೇಕು, ಪ್ರತಿಯೊಬ್ಬ ಮನುಷ್ಯರು ಜೀವಿಸಲು ಮೂಲಭೂತ ಸೌಲಭ್ಯಗಳನ್ನು ಕೇಳುವುದು ನಮ್ಮ ಹಕ್ಕಾಗಿದೆ ಸರ್ಕಾರ ನೀಡುವ ಕೇವಲ ಒಂದು ಸಾವಿರ ರೂನಿಂದ ಹೇಗೆ ಜೀವನ ಸಾಗಿಸಲು ಸಾಧ್ಯ ಎಂದರಲ್ಲದೆ ಎಲ್ಲ ಆಶಾ ಕಾರ್ಯಕರ್ತೆಯರು ಸಂಘಟಿತರಾಗಿ ಹೋರಾಡಿದರೆ ಮಾತ್ರ ಸಮಸ್ಯೆಗಳಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
ಯುಟಿಯುಸಿ ರಾಜ್ಯ ಸಂಘಟನೆ ಸದಸ್ಯರಾದ ಟಿ.ಸಿ.ರಮಾ ಮಾತನಾಡಿ, ನಮ್ಮ ಆಶಾ ಕಾರ್ಯಕರ್ತೆಯರ ಅಮೇಕ ಸಮಸ್ಯೆಗಳನ್ನು ಹೋರಾಟದ ಮೂಲಕವೇ ಜಯ ಸಾಧಿಸಿದ್ದೇವೆ ಆದ್ದರಿಂದ ಎಲ್ಲ ಕಾರ್ಯಕರ್ತೆಯರು ಸಂಘಟನೆ ಮುಖ್ಯವಾಗಿರುತ್ತದೆ ಎಂದರು.
ಸಂಘದ ಸದಸ್ಯ ಜಿ.ಹನುಮೇಶ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement