ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರೇಲ್ವೆ ನಿಲ್ದಾಣ ರಸ್ತೆ ಅಗಲೀಕರಣಕ್ಕೆ ಆಗ್ರಹ

Vishwanath S
Updated On : 10 Jan 2014, 1:08 am

ಆನೇಕಲ್ಲು: ಆನೇಕಲ್‌ನಿಂದ ರೈಲು ನಿಲ್ದಾಣಕ್ಕೆ ಸಂಚರಿಸುವ ರಸ್ತೆ ಮಾರ್ಗ ಕಿರಿದಾಗಿದ್ದು, ಪ್ರಯಾಣಿಕರು ಹಾಗೂ ವಾಹನ ಸವಾರರಿಗೆ ತೊಂದರೆಯಾಗಿದೆ ಎಂಬ ಶಾಸಕರ ಮನವಿಗೆ ಸ್ಪಂದಿಸಿದ ಪ್ರಾಂತೀಯ ರೈಲ್ವೆ ವ್ಯವಸ್ಥಾಪಕ ಅಗರವಾಲ್ ಸ್ಥಳದಲ್ಲೇ ರಸ್ತೆ ಅಗಲೀಕರಣ ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಸಲು ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಕಾಮಗಾರಿಯನ್ನು ತಿಂಗಳೊಳಗೆ ಪೂರ್ಣಗೊಳಿಸಲು ಬೇಕಾದ ನೀಲ ನಕ್ಷೆ ಹಾಗೂ ಅಗತ್ಯ ವಸ್ತುಗಳ ಪಟ್ಟಿ ಮಂಡಿಸುವಂತೆ ತಿಳಿಸಿದರು.
ರೈಲು ನಿಲ್ದಾಣದಲ್ಲಿ ಕುಡಿಯುವ ನೀರು, ಇನ್ನೊಂದು ಬದಿ ಹಳಿಗೆ ಪ್ರಯಾಣಿಕರು ಮತ್ತು ಲಗೇಜ್  ಸಾಗಿಸಲು ಅನುಕೂಲವಾಗುವಂತೆ ಕಬ್ಬಿಣ್ದ ಮೆಟ್ಟಿಲು ಅಳವಡಿಸಲು ಇಂಜನಿಯರ್ ಅವರಿಗೆ ನಕ್ಷೆ ತಯಾರಿಸಲು ತಿಳಿಸಿ ಫ್ಲಾಟ್ ಫಾರಂ ಎತ್ತರಿಸುವಿಕೆ ಮತ್ತು ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆಗೆ ಖಾಸಗಿಯವರಿಗೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಕ್ಯಾಂಟಿನ್ ಮತ್ತು ಸ್ಟೇಷನರಿ ಅಂಗಡಿಗಾಗಿ ಒಂದು ಸ್ಟಾಲ್ ನಿರ್ಮಾಣಕ್ಕೆ ಕೂಡಲೇ ಅದೇಶ ನೀಡಿದರು.ಈ ಟಿಕೆಟ್ ಕೌಂಟರ್ ನಿರ್ಮಾಣಕ್ಕೆ ಸಂಸದರ ನಿಧಿ ಪಡೆಯಲು ಅವಕಾಶವಿದ್ದು, ಶಾಸಕರಿಗೆ ಮನವಿ ಮಾಡಲು ತಿಳಿಸಿದರು.
ಶಾಸಕ ಬಿ. ಶಿವಣ್ಣ ಮಾತನಾಡಿ, ಕೇಂದ್ರ ರೇಲ್ವೆ ಸಚಿವರನ್ನು ಮಾಡಿದ ಭೇಟಿ ಫಲಪ್ರದವಾಗಿದ್ದು ಕೂಡಲೇ ಅಧಿಕಾರಿಗಳ ಸ್ಥಳಕ್ಕೆ  ಭೇಟಿ ನೀಡಿ ಬಹುತೇಕ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಕಾಮಗಾರಿ ಪೂರ್ಣವಾಗಿ ಜನತೆಗೆ ತಲುಪುವವರಿವಿಗೂ ಎಲ್ಲ ಅಧಿಕಾರಿಗಳೊಂದಿಗೆ ಸತತ ಸಂಪರ್ಕವಿಟ್ಟು ಕ್ರಮ ವಹಿಸುವುದಾಗಿ ಹೇಳಿದರು. ಮುಖಂಡರಾದ ಸೋಮಶೇಖರರೆಡ್ಡಿ, ಜಿ. ನಂಜುಂಡಪ್ಪ, ಜಿ. ಗೋಪಾಲ್, ಚೇತನ್ ಶೆಟ್ಟಿ ಪುರಸಭಾ ಸದಸ್ಯರು ಹಾಗೂ ಸ್ಥಳೀಯ ಪ್ರತಿನಿಧಿಗಳು ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement