ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

951 ಘೋರ ಅಪರಾಧ ಪ್ರಕರಣಗಳ ಪೈಕಿ 171 ಪತ್ತೆ

Vishwanath S
Updated On : 12 Jan 2014, 1:32 am

ಕ.ಪ್ರ.ವಾರ್ತೆ , ರಾಮನಗರ , ಜ.11
2013ರಲ್ಲಿ ಜಿಲ್ಲೆಯಲ್ಲಿ ನಡೆದ 951 ಘೋರ ಅಪರಾಧ ಪ್ರಕರಣಗಳ ಪೈಕಿ 171 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 392 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಕಳುವಾಗಿದ್ದ ರು.9.30 ಕೋಟಿ ಪೈಕಿ ರು.4.10 ಕೋಟಿ ಮೌಲ್ಯದ ಮಾಲನ್ನು ವಶಪಡಿಸಿಕೊಂಡು ರು.1.27 ಕೋಟಿ ಮಾಲನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಎಸ್‌ಪಿ ಅನುಪಮ್ ಅಗ್ರವಾಲ್ ತಿಳಿಸಿದರು.
ಜಿಲ್ಲೆಯಲ್ಲಿ ನಡೆದ 51 ಕೊಲೆ ಪ್ರಕರಣಗಳ ಪೈಕಿ 40 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, 62 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 28 ದರೋಡೆ ಪ್ರಕರಣಗಳ ಪೈಕಿ 15ನ್ನು ಪತ್ತೆ ಹಚ್ಚಲಾಗಿದೆ. 79 ಮಂದಿಯನ್ನು ಬಂಧಿಸಿ, ಕಳುವಾಗಿದ್ದ ರು.1.59 ಕೋಟಿ ಮೌಲ್ಯದ ಮಾಲಿಗಿಂತಲೂ ಹೆಚ್ಚು ಮೌಲ್ಯದ ಮಾಲನ್ನು ಅಂದರೆ ರು.1.70 ಕೋಟಿ ವಶಪಡಿಸಿಕೊಂಡು ರು.22.63 ಲಕ್ಷ ಮೌಲ್ಯದಷ್ಟು ಮಾಲನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಜಿಲ್ಲೆಯಲ್ಲಿ 49 ಕಳ್ಳತನ ಪ್ರಕರಣಗಳಲ್ಲಿ 21 ಪ್ರಕರಣಗಳನ್ನು ಪತ್ತೆ ಹಚ್ಚಿ, 60 ಮಂದಿಯನ್ನು ಬಂಧಿಸಲಾಗಿದೆ. ಕಳುವಾಗಿದ್ದ 88.66 ಲಕ್ಷ ಮಾಲಿನ ಪೈಕಿ ಬಂಧಿತರು ನೀಡಿದ ಸುಳಿವಿನ ಮೇರೆಗೆ ರು.33.76 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಂಡು ರು.22.62 ಲಕ್ಷ ಮೌಲ್ಯದ ಮಾಲನ್ನು ಹಿಂದಿರುಗಿಸಲಾಗಿದೆ ಎಂದು ಹೇಳಿದರು.
41 ಸರಗಳ್ಳತನದ ಪೈಕಿ 9 ಪ್ರಕರಣಗಳನ್ನು ಪತ್ತೆ ಹಚ್ಚಿ 9 ಮಂದಿಯನ್ನು ಬಂಧಿಸಿ, ಕಳುವಾಗಿದ್ದ ರು.11.64 ಲಕ್ಷ ಮೌಲ್ಯದ ಚಿನ್ನಾಭರಣ ಪೈಕಿ ರು.7.14 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡು ರು.6.45 ಮೌಲ್ಯದ ಚಿನ್ನಾಭರಣವನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದರು.
273 ಮನೆಗಳ್ಳತನ ನಡೆದಿದ್ದು 23 ಪ್ರಕರಣಗಳನ್ನು ಭೇದಿಸಿ, 38 ಮಂದಿಯನ್ನು ದಸ್ತಗಿರಿ ಮಾಡಲಾಗಿದೆ. ಕಳುವಾಗಿದ್ದ ರು.31.40 ಲಕ್ಷ ಮೌಲ್ಯದ ಮಾಲಿನ ಪೈಕಿ ರು.40 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಂಡು 24.88 ಲಕ್ಷ ಮೌಲ್ಯದ ಮಾಲನ್ನು ಹಿಂದಿರುಗಿಸಲಾಗಿದೆ ಎಂದು ತಿಳಿಸಿದರು.
ಸಾಮಾನ್ಯ ಕಳ್ಳತನ: 507 ಸಾಮಾನ್ಯ ಕಳ್ಳತನ ಪ್ರಕರಣಗಳು ನಡೆದಿದ್ದು ಈ ಪೈಕಿ 63 ಪ್ರಕರಣಗಳನ್ನು ಪತ್ತೆಹಚ್ಚಲಾಗಿದ್ದು, 130 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಕಳುವಾಗಿದ್ದ ರು.3.61 ಕೋಟಿ ಮಾಲಿನ ಪೈಕಿ ರು.1.59 ಕೋಟಿ ಮೌಲ್ಯದ ಮಾಲನ್ನು ವಶಪಡಿಸಿಕೊಂಡು 64.76 ಲಕ್ಷ ಮೌಲ್ಯದ ಮಾಲನ್ನು ಹಿಂದಿರುಗಿಸಲಾಗಿದೆ ಎಂದರು.
ವಶಪಡಿಸಿಕೊಂಡ ಮಾಲಿನಲ್ಲಿ ನಗದು, ಚಿನ್ನಾಭರಣ, ಇನ್ನೋವಾ, ಇಂಡಿಕಾ, ಹೋಂಡಾ ಸಿಟಿ ಕಾರುಗಳು, ಟಾಟಾ ಸುಮೊ, ಲ್ಯಾಪ್ ಟಾಪ್, ಪ್ರೊಜೆಕ್ಟರ್‌ಗಳು, ವಿವಿಧ ಕಂಪೆನಿಯ ಮೊಬೈಲ್‌ಗಳು, ದ್ವಿಚಕ್ರ ವಾಹನಗಳು, ಅಲ್ಯುಮಿನಿಯಂ ವೈರ್, ಆಟೋ, ಕೃಷಿ ಪಂಪ್‌ಸೆಟ್‌ಗಳು ಸೇರಿವೆ.
ದಂಡ ವಸೂಲಿ: 2013ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ನಡೆದ 1802 ಅಪಘಾತಗಳಲ್ಲಿ 418 ಮಂದಿ ಸಾವನ್ನಪ್ಪಿದ್ದು, 1990 ಮಂದಿ ಗಾಯಗೊಂಡಿದ್ದಾರೆ. 33221 ಮಂದಿ ಸಂಚಾರಿ ನಿಯಮ ಉಲ್ಲಂಘಿಸಿದ್ದು, ಇವರಿಂದ 56.23 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 528 ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 362 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಜೂಜು ಅಡ್‌ಡೆ, ಪಡಿತರ ಆಹಾರ ದುರುಪಯೋಗವೂ ಸೇರಿದಂತೆ ಅಕ್ರಮ ಮದ್ಯ ಮಾರಾಟದ ಮೇಲೆ ದಾಳಿ ನಡೆಸಿ ಒಟ್ಟಾರೆ 214 ಪ್ರಕರಣಗಳನ್ನು ದಾಖಲಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.10ರಷ್ಟು ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದು ಅನುಪಮ್ ಅಗ್ರವಾಲ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement