ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜೆಸಿಐ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಭಾಗ್ಯ ರಮೇಶ್

Vishwanath S
Updated On : 13 Jan 2014, 1:18 am

ದೇವನಹಳ್ಳಿ: ಇಲ್ಲಿನ ಜೇಸಿಐ ಸಂಸ್ಥೆಯ 11 ನೆಯ ವರ್ಷದ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಇಲ್ಲಿನ ಶ್ರೀ ನಗರೇಶ್ವರ ಕಲ್ಯಾಣ ಮಂದಿರದಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿತ್ತು. ಇದೇ ಪ್ರಥಮ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಭಾಗ್ಯ ರಮೇಶ್ ಅಧಿಕಾರ ಸ್ವೀಕಾರ ಮಾಡಿದರು.
ನೂತನ ಸಾಲಿನ ಎಲ್ಲ ಪದಾಧಿಕಾರಿಗಳಿಗೆ ವಲಯ ಉಪಾಧ್ಯಕ್ಷ ಡಾ.ಜಯಚಂದ್ರ ಪ್ರಮಾಣ ವಚನ ಬೋಧಿಸಿದರಲ್ಲದೆ ನೂತನ ಅಧ್ಯಕ್ಷರ ಅವಧಿಯಲ್ಲಿ ಹೆಚ್ಚಿನ ಒಳ್ಳೆಯ ಕಾರ್ಯಕ್ರಮಗಳನ್ನು ನಾವು ನಿರೀಕ್ಷೆ ಮಾಡುತ್ತೇವೆ ಅಲ್ಲದೆ ಎಲ್ಲ ಸದಸ್ಯರ ಮತ್ತು ಪ್ರೋತ್ಸಾಹಕರ ಸಹಕಾರವಿಲ್ಲದೆ ಅಧ್ಯಕ್ಷರಾದವರು ಏನು ಮಾಡಲು ಸಾಧ್ಯವಿಲ್ಲ ಎಂದರು.
 ಮುಖ್ಯ ಅತಿಥಿಗಳಾಗಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ ಸಮಾಜದ ಯುವಕರಿಗಾಗಿ ವ್ಯಕ್ತಿತ್ವ ವಿಕಸನ ತರಬೇತಿ ನೀಡುವ ಸಂಸ್ಥೆಯ ಉದ್ದೇಶ ಅಭಿನಂದನೀಯ ಎಂದರಲ್ಲದೆ ಎಲ್ಲ ಸೇವಾ ಕಾರ್ಯಗಳನ್ನು ಕೇವಲ ಸರ್ಕಾರಗಳು ಮಾಡಲು ಸಾಧ್ಯವಿಲ್ಲ. ಈ ರೀತಿಯ ಸೇವಾ ಸಂಸ್ಥೆಗಳು ತಮ್ಮದೇ ಆದ ಸೇವಾ ಕಾರ್ಯಗಳನ್ನು ಮತ್ತು ಯುವಕರನ್ನು ಸಮಾಜದಲ್ಲಿ ಮೌಲ್ಯಯುತ ವ್ಯಕ್ತಿಗಳನ್ನಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರಲ್ಲದೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಆಯೋಜಿಸಲಾಗಿದೆ, ನಿಮ್ಮ ಸಂಸ್ಥೆಯ ಸಹಕಾರ ಅಗತ್ಯ ಎಂದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎ.ಎಂ. ಹರೀಶ್ ವಹಿಸಿ ತಮ್ಮ ಅವಧಿಯಲ್ಲಿ ಸಹಕರಿಸಿದ ಎಲ್ಲ ಸದಸ್ಯರಿಗೆ ಕೃತಜ್ಞತೆ ಅರ್ಪಿಸಿದರು. ಇದೇ ಸಂಧರ್ಭದಲ್ಲಿ ವಲಯ ನಿರ್ದೇಶಕ ವಿ. ಶ್ರೀನಿವಾಸ್ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯದರ್ಶಿ ಎಸ್. ಪ್ರಭುದೇವ್ ವರದಿ ನೀಡಿದರು. ಸಮಾರಂಭದಲ್ಲಿ ಸಂಸ್ಥೆಯ ಪ್ರಥಮ ಅಧ್ಯಕ್ಷ ಪದ್ಮರಾಜ್ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಎನ್. ರಮೇಶ್ ಮಾತನಾಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವುದೇ ಸಂಸ್ಥೆಯ ಉದ್ದೇಶವಾಗಿದೆ ಎಂದರು.
ನೂತನ ಸಾಲಿಗೆ ಭಾಗ್ಯ ರಮೇಶ್ - ಅಧ್ಯಕ್ಷೆ, ವಿ.ಅರವಿಂದ- ಕಾರ್ಯದರ್ಶಿ, ವಿ.ಮಂಜುನಾಥ್ ಖಜಾಂಚಿ, ಎಂ.ಬಾಬು, ಟಿ.ಆರ್.ಲೋಕೇಶ್, ಡಿ.ಎಂ. ಮುನಿಕೃಷ್ಣ, ಎಸ್.ಪ್ರಭುದೇವ್ - ಉಪಾಧ್ಯಕ್ಷರುಗಳು, ಬಿ.ಶಿವಪ್ರಸಾದ್-ಸಹ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement