ದೇವನಹಳ್ಳಿ ಶಾರದಾ ಶಾಲೆಯಲ್ಲಿ ಅಮ್ಮಂದಿರ ಹಬ್ಬ
ದೇವನಹಳ್ಳಿ: ಇಲ್ಲಿನ ಟಿಪ್ಪೂ ರಸ್ತೆಯಲ್ಲಿರುವ ನ್ಯೂ ಶಾರದ ಪಬ್ಲಿಕ್ ಶಾಲೆಯಲ್ಲಿ 7 ನೇ ವರ್ಷದ ವಾಷಿಕೋತ್ಸವ ಅಂಗವಾಗಿ ಅಮ್ಮಂದಿರ ಹಬ್ಬವನ್ನು ಭಾನುವಾರ ಶಾಲಾ ಆವರಣದಲ್ಲಿ ಶಾಲಾ ಆಡಳಿತ ಮಂಡಳಿಯವರು ಆಯೋಜಿಸಿದ್ದರು.
ಅಧ್ಯಕ್ಷತೆಯನ್ನು ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ನೆರವೇರಿಸಿ ಉದಾರೀಕರಣ ಮತ್ತು ಜಾಗತೀಕರಣ ಬಂದಮೇಲೆ ಬಹುತೇಕ ಹಬ್ಬಗಳು ಕೇವಲ ವ್ಯಾಪಾರಿ ಮತ್ತು ಲಾಭದ ದೃಷ್ಟಿಯಿಂದಲೇ ಆಚರಣೆಯಾಗುತ್ತದೆ ಎಂದರಲ್ಲದೆ ಈ ಶಾಲೆಯಲ್ಲಿ ಜಾತಿ ಭೇದವಿಲ್ಲದೆ ತಾಯಂದಿರಿಗಾಗಿ ಅಮ್ಮಂದಿರ ಹಬ್ಬ ಆಚರಿಸುತ್ತಿರುವುದು ಅಭಿನಂದನೀಯ ಎಂದು ತಿಳಿಸಿದರು. ತಾಯಿ ತಂದೆ ತಮ್ಮ ಮಕ್ಕಳಿಗೆ ಬಸವಣ್ಣ ಬುದ್ಧ ಅಲ್ಲದೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ತಿಳಿಸುವುದರ ಜೊತೆಯಲ್ಲಿ ನಮ್ಮ ಸಂಸ್ಕೃತಿಯನ್ನು ತಿಳಿಸಬೇಕಾಗಿದೆ. ನಾವು ಒಳ್ಳೆಯದನ್ನು ಮಾಡುತ್ತಿದ್ದರೆ ಮಕ್ಕಳು ಅದನ್ನು ಅನುಕರಿಸುತ್ತವೆ ಎಂದರು.
ಅಧ್ಯಕ್ಷತೆಯನ್ನು ಸಂಸ್ಥಾಪಕ ಶ್ರೀಕಂಠಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಜಯಕುಮಾರ್, ಡಾ. ಪ್ರಶಾಂತ್, ಗಿರಿಜಮ್ಮ, ಎಸ್. ವಿನಯಕುಮಾರ್, ಮುಖ್ಯ ಶಿಕ್ಷಕಿ ಪುಷ್ಪಾಂಜಲಿ ವಿನಯಕುಮಾರ್ ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಹನ್ನೆರಡು ಮಂದಿ ತಾಯಂದಿರಿಗೆ ಅರಿಶಿಣ ಕುಂಕುಮ ನೀಡಿ ಫಲ ತಾಂಬೂಲ ನೀಡಿ ಸನ್ಮಾನ ಮಾಡಲಾಯಿತು.ಶಿಕ್ಷಕ ಗುರುಪ್ರಸಾದ್ ಸ್ವಾಗತ ಕೋರಿದರು.