ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ಜಿಲ್ಲಾ ಕೇಂದ್ರ: ಹೋರಾಟ ತೀವ್ರ

Vishwanath S
Updated On : 14 Jan 2014, 1:25 am

ಕ.ಪ್ರ.ವಾರ್ತೆ ,  ದೇವನಹಳ್ಳಿ ,  ಜ.13
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ದೊಡ್ಡಬಳ್ಳಾಪುರದಲ್ಲಿ  ಉಪವಿಭಾಗಾಧಿಕಾರಿಗಳ ಕಚೇರಿಯನ್ನು ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸುವ ದೃಷ್ಟಿಯಿಂದ ಕೆಲವು ಕಟ್ಟಡಗಳ ಪರಿಶೀಲನೆ ನಡೆಸಿದ ಹಿನ್ನೆಲೆಯಲ್ಲಿ ದೇವನಹಳ್ಳಿ ತಾಲೂಕು ಜಿಲ್ಲಾ ಹೋರಾಟ ಸಮಿತಿಯವರು ಶಾಸಕ ಪಿಳ್ಳಮುನಿಶಾಮಪ್ಪರವರ ನೇತೃತ್ವದಲ್ಲಿ ಇತರ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಸಂಘ ಸಂಸ್ಥೆಗಳ ಕಾರ್ಯಕರ್ತರೊಂದಿಗೆ ಸೋಮವಾರ ಇಲ್ಲಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಸಿದರು.
 ಈ ಸಂದರ್ಭದಲ್ಲಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ ದೇವನಹಳ್ಳಿ ಇತಿಹಾಸ ಪ್ರಸಿದ್ಧವಾದ ಪಟ್ಟಣವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 4 ತಾಲೂಕುಗಳಲ್ಲಿ ದೇವನಹಳ್ಳಿ ತಾಲೂಕು ಕೇಂದ್ರವಾಗಿದ್ದು ಉಳಿದ ತಾಲೂಕುಗಳಿಗೆ ಉತ್ತಮ ರಸ್ತೆ ಸಂಪರ್ಕವಿದೆ. ಅಲ್ಲದೆ ಎಲ್ಲಕ್ಕಿಂತ ಈ ಭಾಗದಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವುದರಿಂದ ಕೈಗಾರಿಕಾ ವಲಯ, ಏರೋಸ್ಪೇಸ್ ಪಾರ್ಕ್, ಮಾಹಿತಿ
ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಿಶೇಷ ವಿತ್ತವಲಯಕ್ಕಾಗಿ 12 ಸಾವಿರ ಭೂಮಿ ಶಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಮುಂದಿನ ದಿನಗಳಲ್ಲಿ ಜನಸಂಖ್ಯಾ ಒತ್ತಡದಿದಾಗಿ ದೇವನಹಳ್ಳಿಗೆ ಮೆಟ್ರೋ ರೈಲು ಬರುವದು ಖಚಿತವಾಗಿದೆ. ದೇವನಹಳ್ಳಿ ಎಲ್ಲ ರೀತಿಯಲ್ಲೂ ಬೆಳವಣಿಗೆಯಾಗುತ್ತಿದ್ದು ಮುಂದಿನ ಹತ್ತು ವರ್ಷಗಳಲ್ಲಿ ದೇವನಹಳ್ಳಿಯ ಭವಿಷ್ಯವೇ ಬದಲಾಗಲಿದೆ ಎಂದರು. ಬೆಂಗಳೂರಿಗೆ ಕೇವಲ 30 ನಿಮಿಷಗಳಲ್ಲಿ  ಅಧಿಕಾರಿಗಳು, ಪ್ರಜಾಪ್ರತಿನಿಧಿಗಳು ತಲುಪಬಹುದಾಗಿದೆ ಎಂದು ತಿಳಿಸಿದರು.
16ರಿಂದ ಹೋರಾಟ ತೀವ್ರ: ರಾಜ್ಯ ಸರ್ಕಾರ ದೇವನಹಳ್ಳಿ ಜನತೆಯ ಮನವಿಯಂತೆ ಜಿಲ್ಲಾ ಕೇಂದ್ರಕ್ಕಾಗಿ ಜ.16 ರಿಂದ ಹೋರಾಟ ತೀವ್ರಗೊಳ್ಳಲಿದೆ ಎಂದು ಶಾಸಕರು ತಿಳಿಸಿದರು.
ಇದೇ ಸಂಧರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಕೆ ಶಿವಪ್ಪ ಮಾತನಾಡಿ ಉಪವಿಭಾಗಾಧಿಕಾರಿಗಳ ಕಚೇರಿಗಾಗಿ ದೇವನಹಳ್ಳಿಯಲ್ಲಿ ಸರ್ಕಾರಿ ಕಟ್ಟಡಗಳು ಇವೆ. ಅನೇಕ ಖಾಸಗೀ ಕಟ್ಟಡದ ಮಾಲೀಕರು ಬಾಡಿಗೆಗೆ ಕೊಡಲು ಮುಂದೆ ಬಂದಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಇತ್ತಕಡೆ ಗಮನ ಹರಿಸಬೇಕು ಮತ್ತು ಸರ್ಕಾರಕ್ಕೆ ವಾಸ್ತವ ಅಂಕಿ ಅಂಶಗಳನ್ನು ನೀಡಿ ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿಗಳ ಮತ್ತು ಉಪವಿಭಾಗಾಧಿಕಾರಿಗಳ ಕಚೇರಿಗಳು ಜಂಟಿಯಾಗಿ ಇಲ್ಲಿ ಕಾರ್ಯನಿರ್ವಹಿಸಬೇಕು ಎಂದರು. ದೇವನಹಳ್ಳಿ ವಲಯ ವ್ಯಾಪ್ತಿಯಲ್ಲಿ ಅಬಕಾರಿ ಇಲಾಖೆಯಲ್ಲಿ 2012-13 ನೇ ಸಾಲಿನಲ್ಲಿ 62 ಕೋಟಿ ರು.ಗಳ ವ್ಯವಹಾರವಾಗಿದೆ. ಉಪ ನೋಂದಣಿ ಕಚೇರಿಯಲ್ಲಿ ಮುದ್ರಾಂಕ ಶುಲ್ಕ 70 ಕೋಟಿ ರು.ಗಳು ವಸೂಲಿಯಾಗಿದ್ದು ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ 11 ಕೋಟಿಗೂ ಹೆಚ್ಚು ತೆರಿಗೆ ವಾಹನಗಳಿಂದ ವಸೂಲಿಯಾಗಿದೆ ಎಂದು ಅಂಕಿ ಅಂಶಗಳನ್ನು ನೀಡಿದರು.
ಪ್ರತಿಭಟನಾ ಸಭೆಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಮುನಿಶಾಮಿಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸಿ. ಮುನಿರಾಜು, ಮಾಜಿ ಅಧ್ಯಕ್ಷರಾದ ಕೆ.ಸಿ.ವೆಂಕಟೇಗೌಡ, ಶ್ರೀರಾಮಯ್ಯ, ಒಕ್ಕಲಿಗರ ಸಂಘದ ಕಾರ್ಯದರ್ಶಿ ಎ. ಶಿವರಾಮಯ್ಯ, ರೈತ ಸಂಘದ ಮುಖಂಡರಾದ ವೆಂಕಟನಾರಾಯಣಪ್ಪ, ಕಾಂಗ್ರೆಸ್ ಮುಖಂಡರಾದ ಆರ್. ರವಿಕುಮಾರ್, ಶ್ರೀನಿವಾಸಗೌಡ, ರೇಷ್ಮೆ ಹೋರಾಟ ಸಮಿತಿಯ ಕಲ್ಯಾಣಕುಮಾರ್, ಪುರಸಭಾ ಸದಸ್ಯರುಗಳಾದ ಜಿ.ಎ.ರವೀಂದ್ರ, ಶಶಿಕುಮಾರ್, ನರಸಿಂಹಮೂರ್ತಿ, ಗೋಪಾಲ್ ಅಲ್ಲದೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement