ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಸ್ತೆ ಅಭಿವೃದ್ಧಿಗೆ ರು. 95 ಲಕ್ಷ ಬಿಡುಗಡೆ: ಶಾಸಕ

Vishwanath S
Updated On : 15 Jan 2014, 1:23 am

ಸೂಲಿಬೆಲೆ: ಹೊಸಕೋಟೆ ತಾಲೂಕಿನ ನಾನಾ ಗ್ರಾಮಗಳಲ್ಲಿರುವ ರಸ್ತೆಗಳ ಅಭಿವೃದ್ಧಿಗೆ ಸರ್ಕಾರದಿಂದ ರು.95 ಲಕ್ಷ ಹಣ ಬಿಡುಗಡೆಯಾಗಿದೆ ಎಂದು ಶಾಸಕ ಎನ್. ನಾಗರಾಜ್ ತಿಳಿಸಿದ್ದಾರೆ.
ನಂದಗುಡಿ ಹೋಬಳಿ ಇಟ್ಟಸಂದ್ರ  ಗ್ರಾಪಂದ ಈಸ್ತೂರು ಹೊಸಹಳ್ಳಿ ಗ್ರಾಮದಲ್ಲಿ ರು.5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ  ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನಡೆಸಿ ಅವರು ಮಾತನಾಡಿದರು.ಹೊಸಕೋಟೆ ಕ್ಷೇತ್ರದ ನಾನಾ ಗ್ರಾಮಗಳಲ್ಲಿ ಶಾಸಕರ ಅನುಧಾನದಡಿಯಲ್ಲಿ ಕೈಗೊಳ್ಳಲಿರುವ ಕಾಮಗಾರಿಗಳಿಗೆ  ಹಣ ಬಿಡುಗಡೆಯಾಗಿದ್ದು ಪ್ರತಿಯೊಂದು ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡಲು ತಲಾ ರು.5 ಲಕ್ಷವನ್ನು ಹಣವನ್ನು ನೀಡಲಾಗುವುದು.ಇದರಿಂದ 8 ರಿಂದ 10 ಅಡಿ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗಲಿವೆ. ಮೊದಲ ಹಂತವಾಗಿ ಈಸ್ತೂರು ಗ್ರಾಮದಲ್ಲಿ ಶಂಕುಸ್ಥಾಪನೆ ನಡೆಸಿದ್ದು, ಇನ್ನೂ 16 ಗ್ರಾಮಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಮಾಗಡಿ ತಾಲೂಕಿನಾದ್ಯಂತ ಸಂಭ್ರಮದ ಈದ್ ಮಿಲಾದ್
ಮಾಗಡಿ: ಮಾಗಡಿ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು.  ಈದ್ ಮಿಲಾದ್ ಪ್ರಯುಕ್ತ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ಈದ್ ಮಿಲಾದ್  ಅಂಗವಾಗಿ  ಪಟ್ಟಣದಲ್ಲಿ ಹಳೇ ಮತ್ತು ಹೊಸ ಮಸೀದಿ ಮೊಹಲ್ಲಾಗಳಲ್ಲಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದರು. ನಂತರ ಎಲ್ಲರಿಗೂ ಸಿಹಿ ಹಂಚಿ  ಶುಭಾಶಯ ವಿನಿಮಯ ಮಾಡಿಕೊಂಡರು.   ಮುಖಂಡರಾದ ಮಹಮದ್  ಅಲ್ಲಾ ಬಕ್ಷ್, ಸೈಯದ್ ಬರಕತ್, ನಸರತ್  ಉಲ್ಲಾಖಾನ್,  ಮಹಮದ್ ಜಾವಿದ್ ರಿಜ್ವಿ,  ಸಿಂಕಂದರ್, ಅನ್ವರ್ ಪಾಷ, ಗೌಸ್ ಬೇಗ್, ರಿಜ್ವಾನ್  ಪಾಷ, ಬಾಬಾ ಶಬೀರ್, ಅಜ್ಗರ್, ವಾಸಿಂ ಸೇರಿದಂತೆ ಪಿಎಫ್‌ಐ ಮತ್ತು ಮಿಲದ್ದುನ್ನಿ  ನಬಿ ಸಮಿತಿ ಪದಾಧಿಕಾರಿಗಳು ಹಾಗೂ ಮುಸ್ಲಿಂ ಮುಖಂಡರು ಹಾಜರಿದ್ದರು.
ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಅಗತ್ಯ: ರಂಗಸ್ವಾಮಿ
ಮಾಗಡಿ: ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಇರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಆರ್. ರಂಗಸ್ವಾಮಿ ನುಡಿದರು. ಅವರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಸೇವಾದಳದ ತಾಲೂಕು ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ರಾಷ್ಟ್ರೀಯ ಭಾವೈಕ್ಯತೆ ಮಕ್ಕಳ ಮೇಳವು ಮಕ್ಕಳಲ್ಲಿನ ವ್ಯಕ್ತಿತ್ವ ವಿಕಾಸಗೊಳ್ಳಲು ಸಹಕಾರಿ ಎಂದರು. ತಾ.ಪಂ. ಅಧ್ಯಕ್ಷ ಜಿ. ಕೃಷ್ಣ ಮಾತನಾಡಿ ಸ್ವಾರ್ಥ ಸಾಧನೆಗಾಗಿ ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಶಿಕ್ಷಕರು ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಸಿದರೆ, ಭ್ರಷ್ಟಾಚಾರಕ್ಕೆ ಅಷ್ಟಾಗಿ ಆಸ್ಪದವಿರುವುದಿಲ್ಲ ಎಂದರು.    ಭಾರತ ಸೇವಾದಳದ ತಾಲೂಕು ಘಟಕದ ಅಧ್ಯಕ್ಷ ಶಿವಕುಮಾರ್,  ಮಹಿಳಾ ಸಂಘಟನಾ ಕಾರ್ಯದರ್ಶಿ ಕಲ್ಪನಾ ಶಿವಣ್ಣ ಮಾತನಾಡಿದರು.  ಇದೇ ವೇಳೆ ಧ್ವಜ ವಂದನೆ, ಪ್ರಭಾತ್ ಪೇರಿ, ಪಥಸಂಚಲನ,  ಸಾಮೂಹಿಕ ಕವಾಯಿತ್ ನಡೆಯಿತು.   ತಾ.ಪಂ. ಉಪಾಧ್ಯಕ್ಷ ಭಾರತಿ ಮಹದೇವಯ್ಯ, ಪುರಸಭಾ ಸದಸ್ಯೆ ಹೊಂಬಮ್ಮ ನರಸಿಂಹಮೂರ್ತಿ, ಸೇವಾದಳದ ಜಿಲ್ಲಾ ಸಮಿತಿ ಸದಸ್ಯರಾದ ವೀರೇಗೌಡ, ಪುಟ್ಟಯ್ಯ, ಎಂ.ಜಿ.ಶಿವರಾಮಯ್ಯ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕಾಂತರಾಜು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಮುದ್ದಹನುಮಯ್ಯ, ಗಂಗಯ್ಯ, ಪರಮೇಶ್ವರ್, ಬಸವರಾಜು, ದೇವೇಗೌಡ,ನಾಗರಾಜಾಚಾರ್, ಚಿಕ್ಕವೀರಯ್ಯ, ಯಶೋಧ, ಜಯಲಕ್ಷ್ಮೀ ಇತರರು ಇದ್ದರು.
ಉಚಿತ ನೇತ್ರ ಚಿಕಿತ್ಸಾ ಶಿಬಿರ
ದೇವನಹಳ್ಳಿ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ ಹಾಗೂ ಲಯನ್ಸ್ ಸೇವಾ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಗುರುವಾರ 146ನೆ  ಕಣ್ಣಿನ ಉಚಿತ ಪರೀಕ್ಷೆ ಹಾಗೂ ದಂತ ಚಿಕಿತ್ಸಾ ಶಿಬಿರವನ್ನು ಸಂಯುಕ್ತವಾಗಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್. ನಾಗರಾಜಯ್ಯ ತಿಳಿಸಿದ್ದಾರೆ.  ಶಿಬಿರದ ಉದ್ಘಾಟನೆಯನ್ನು ಬೆಂಗಳೂರು ಮೆಟ್ರೋ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎಚ್.ಎಸ್. ಸೋಮಶೇಖರ್ ನೆರವೇರಿಸಲಿದ್ದು, ಕಣ್ಣಿನ ಮತ್ತು ಹಲ್ಲಿನ ತೊಂದರೆ ಇರತಕ್ಕವರು ಶಿಬಿರದ ಪ್ರಯೋಜನ ಪಡೆಯಬೇಕೆಂದು ಕಾರ್ಯದರ್ಶಿ ಕೆ.ಎಸ್.ರಮೇಶಬಾಬು ತಿಳಿಸಿ ಶಿಬಿರಗಳನ್ನು ಬೆಂಗಳೂರು ಪಶ್ಚಿನ ಲಯನ್ಸ್ಕ್‌ಣ್ಣಾಸ್ಪತ್ರೆ ಹಾಗೂ ಶ್ರೀ ಕೃಷ್ಣದೇವರಾಯ ದಂತ ವೈದ್ಯಕೀಯ ಮಹಾ ವಿದ್ಯಾಲಯದ ನುರಿತ ವೈದ್ಯರು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.  
ಮಾನವಿಕ ವಿಚಾರ ವಸ್ತುಪ್ರದರ್ಶನ
ಕನಕಪುರ: ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ, ಸೃಜನಶೀಲತೆಗಳನ್ನು ಪ್ರದರ್ಶಿಸಲು ಅಗತ್ಯ ಪರಿಸರವನ್ನು ಸೃಷ್ಟಿಸುವ ಹೊಣೆಗಾರಿಕೆ ಶಿಕ್ಷಣ ಸಂಸ್ಥೆಗಳ ಮೇಲಿದೆ. ಸಾಂಸ್ಕೃತಿಕ, ಕ್ರೀಡೆ, ವಸ್ತುಪ್ರದರ್ಶನ ಮೊದಲಾದವುಗಳು ಮಕ್ಕಳಲ್ಲಿನ ಸೃಜನಶೀಲತೆಯನ್ನು ವೃದ್ಧಿಸುತ್ತವೆ ಎಂದು ಮದರ್ ಥೆರೇಸಾ ಇಂಟರ್ ನ್ಯಾಷನಲ್‌ಸ್ಕೂಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಲಕ್ಷ್ಮೀಶ್ ಹೇಳಿದ್ದಾರೆ. ಅವರು ಕನಕಪುರದ ಸಂಸ್ಥೆಯ ಆವರಣದಲ್ಲಿ ವಿಜ್ಞಾನ ಹಾಗೂ ಮಾನವಿಕ ವಿಚಾರಗಳ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಎಂಐಟಿಎಸ್‌ಶಾಲಾ ವಿದ್ಯಾರ್ಥಿಗಳು ವಿಜ್ಞಾನ ಪ್ರಯೋಗಗಳ, ಮಾದರಿಗಳ ಪ್ರದರ್ಶನ, ಕ್ರಿಯಾಶೀಲತೆ ಬಿಂಬಿಸುವ ವಸ್ತುಗಳ ರಚನೆ, ಟೆರ್ರಾಕೋಟಾ, ಪೇಂಟಿಂಗ್, ಕರಕುಶಲ ಮಾದರಿಗಳ ಪ್ರದರ್ಶನವನ್ನು ನಡೆಸಿದರು. ಪಟ್ಟಣದ ಅನೇಕ ಶಾಲಾ ವಿದ್ಯಾರ್ಥಿಗಳೂ ಸೇರಿದಂತೆ ಸಾವಿರಾರು ಜನರು ಮೂರು ದಿನಗಳ ಕಾಲ ನಡೆದ ವಸ್ತುಪ್ರದರ್ಶನವನ್ನು ವೀಕ್ಷಿಸಿದರು.
ಬ್ಲಾಸಂಫೆಸ್ಟ್-2014 ಕಾರ್ಯಕ್ರಮ
ಕನಕಪುರ: ಕನಕಪುರದ ಬ್ಲಾಸಂಶಾಲಾ ಆವರಣದಲ್ಲಿ ಬ್ಲಾಸಂಫೆಸ್ಟ್-2014 ಕಾರ್ಯಕ್ರಮ ವಿನೂತನವಾಗಿ ವಿಶಿಷ್ಟವಾಗಿ ನಡೆಯಿತು. ಶಾಲೆಯ ಬಗ್ಗೆ ವಿದ್ಯಾರ್ಥಿಗಳು ಮಾತನಾಡುತ್ತಾ, ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸುವಲ್ಲಿ ಶಾಲೆ ಮಹತ್ವದ ಪಾತ್ರ ವಹಿಸುತ್ತಿದೆ, ಪ್ರಬಂಧ ಸ್ವರ್ಧೆಗಳು, ದೇಸೀ ಆಟಗಳ ಸ್ಪರ್ಧೆಗಳನ್ನು ಏರ್ಪಡಿಸಿ ಉತ್ತೇಜನ ನೀಡಲಾಗುತ್ತಿದೆ. ಉಚಿತ ತರಗತಿಗಳು, ಕಲಿಕಾ ಸಾಮಗ್ರಿಗಳು ಹಾಗೂ ಗ್ರಂಥಾಲಯದ ಸೌಲಭ್ಯವನ್ನು ಪಡೆದಿರುವ ಶಾಲೆಯು ಹಲವಾರು ವರ್ಷಗಳಿಂದ ನಿರಂತರವಾಗಿ ಶೇ. 100 ಫಲಿತಾಂಶ ದಾಖಲಿಸುತ್ತಾ ಮಾದರಿಯಾಗಿದೆಎಂದು ಹೇಳಿದರು.
ಸೈಕಲ್‌ಗೆ ಕ್ರೇನ್ ಡಿಕ್ಕಿ: ಯುವಕ ಸಾವು
ದೊಡ್ಡಬಳ್ಳಾಪುರ: ಸೈಕಲ್‌ಗೆ ಕ್ರೇನ್ ಡಿಕ್ಕಿಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಫ್ಯಾಕ್ಟರಿ ವೃತ್ತದ ಬಳಿ ಮಂಗಳವಾರ ಸಂಜೆ ನಡೆದಿದೆ. ಮೃತಪಟ್ಟವನನ್ನು ತಾಲೂಕಿನ ಜಿಂಕೆಬಚ್ಚಹಳ್ಳಿಯ ಯುವಕ ಆನಂದ್(22) ಎಂದು ಗುರುತಿಸಲಾಗಿದೆ. ಕ್ರೇನ್ ಡಿಕ್ಕಿ ಹೊಡೆದು ಸವಾರನ ಮೇಲೆ ಹರಿದಿದೆ. ಅಪಘಾತ ಸಂಬಂಧ ಗ್ರಾಮಸ್ಥರು ಕೆಲಕಾಲ ರಸ್ತೆಯಲ್ಲಿ ಶವವಿಟ್ಟು ಫ್ಯಾಕ್ಟರಿ ಸರ್ಕಲ್‌ನಲ್ಲಿ ರಸ್ತೆತಡೆ ನಡೆಸಿದರು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ರಸ್ತೆಯಲ್ಲಿ ಹೆಚ್ಚುತ್ತಿರುವ ಟ್ರಾಫಿಕ್, ಕಿಷ್ಕಿಂದ ರಸ್ತೆ ಘಟನೆಗೆ ಕಾರಣ ಎಂಬುದು ಗ್ರಾಮಸ್ಥರ ಆರೋಪ. ದೊಡ್‌ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದಲ್ಲಿ ಯುವಕ ಸಾವು
ದೊಡ್ಡಬಳ್ಳಾಪುರ: ಇಲ್ಲಿನ ಬಿಎಂಶ್ರೀರಸ್ತೆಯಲ್ಲಿ ಪ್ರಸನ್ನ ಚಿತ್ರಮಂದಿರ ಸಮೀಪ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಬೆಸ್ತರಪೇಟೆಯ ನಿವಾಸಿ ಅವಿನಾಶ್(22) ಮೃತಪಟ್ಟ ದುರ್ದೈವಿ. ದ್ವಿಚಕ್ರವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಣವೆಗೆ ಬೆಂಕಿ: ಅಪಾರ ಹಾನಿ
ದೊಡ್ಡಬಳ್ಳಾಪುರ: ತಾಲೂಕಿನ ತಿಪ್ಪೂರು ಗ್ರಾಮದ ಬಳಿ ಸುತ್ತಹಳ್ಳಿ ತಾಂಡದಲ್ಲಿ ಬಣವೆಗಳಿಗೆ ಆಕಸ್ಮಿಕ ತಗುಲಿ ಸಂಪೂರ್ಣ ಭಸ್ಮವಾಗಿರುವ ಘಟನೆ ಮಂಗಳವಾರ ನಡೆದಿದೆ. ಗ್ರಾಮದ ರಾವಿಬಾಯಿ, ನಾಗರಾಜಲಾಲ್ ಮತ್ತು ಅನಿಬಾಯಿ ಎಂಬುವವರಿಗೆ ಸೇರಿದ 3 ಬಣವೆಗಳಿಗೆ ಬೆಂಕಿ ತಗುಲಿದ್ದು ರಾಗಿ, ಜೋಳ ಮತ್ತು ತೊಗರಿ ಬಣವೆಗಳು ಬೆಂಕಿಗೆ ಭಸ್ಮವಾಗಿವೆ. ಸುಮಾರು 3 ಲಕ್ಷ ರು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು, ದೊಡ್ಡಬೆಳವಂಗಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಗ್ರಾಮೀಣ ಪ್ರದೇಶದ ಜನತೆಗೆ ಕುಡಿವ ನೀರು ಪೂರೈಕೆಗೆ ಸೂಕ್ತ ಕ್ರಮ
ಮಾಗಡಿ: ಗ್ರಾಮೀಣ ಪ್ರದೇಶದ ಜನತೆಗೆ ಸಮಗ್ರವಾಗಿ  ಕುಡಿಯುವ ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಕೈಗಾರಿಕೆ ಮತ್ತು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ  ವಿಜಯಕುಮಾರ್ ತಿಳಿಸಿದರು.
ಅವರು ಮಾಗಡಿ ತಾಲೂಕಿನ ಪಿ.ಸಿ. ಪಾಳ್ಯ ಮತ್ತು ಚಿಕ್ಕಮಸ್ಕಲ್ ಗ್ರಾಮ ಬಳಿ ತಲಾ ಸುಮಾರು 13 ಲಕ್ಷ ರು. ವೆಚ್ಚದಲ್ಲಿ ಎರಡು ಸುಸಜ್ಜಿತ ನೂತನ ಓವರ್ ಟ್ಯಾಂಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು, ಕಟ್ಟಕಡೆಯ ವ್ಯಕ್ತಿಗೆ ಸರ್ಕಾರ ಸೌಲತ್ತುಗಳನ್ನು ಒದಗಿಸುವುದು ಮತ್ತು ಸೌಕರ್ಯಗಳನ್ನು ಕಲ್ಪಿಸುವುದು ಆಧ್ಯ ಕರ್ತವ್ಯವಾಗಿದೆ ಎಂದರು.
ತಾ.ಪಂ.ಉಪಾಧ್ಯಕ್ಷ ಭಾರತಿ ಮಹದೇವಯ್ಯ ಮಾತನಾಡಿದರು.
ಟ್ಯಾಂಕ್ ನಿರ್ಮಾಣಕ್ಕೆ ಭೂಮಿ ನೀಡಿರುವ ದಾನಿ ಬೋರಲಿಂಗಯ್ಯ, ಮಳಗಪ್ಪ, ನೇತೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ದಶರಥ, ಮಾಜಿ ಅಧ್ಯಕ್ಷ ಪಿ.ವಿ. ಶಾಂತರಾಜು, ಬಾಚೇನಹಟ್ಟಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್, ಸದಸ್ಯರಾದ ಬಿ.ಜೆ.ಶಿವಮೂರ್ತಿ, ರಂಗನಾಥ್, ಗೌರಮ್ಮ ಸಿದ್ದಪ್ಪ, ದಯಾನಂದ್, ನಾರಾಯಣ, ತಾ.ಪಂ.ಸದಸ್ಯೆ ತೇಜಸ್ವನಿ ಮುದ್ದಹನುಮೇಗೌಡ, ಯಾಲಕಪ್ಪ, ನರಸಿಂಹಯ್ಯ, ಗುತ್ತಿಗೆದಾರ ರೇಣುಕಪ್ಪ, ಎಇಇ ರವಿ ಎಸ್. ಸೂರನ್, ಎಇ ಗುರುಶಂಕರ್ ಸೇರಿದಂತೆ ಯುವಮುಖಂಡರು ಇತರೆ ಗ್ರಾಮಸ್ಥರು ಇದ್ದರು.
ರೈಲಿಗೆ ಸಿಕ್ಕಿ ವ್ಯಕ್ತಿ ಸಾವು
ದೊಡ್ಡಬಳ್ಳಾಪುರ: ಇಲ್ಲಿನ ಮುತ್ತೂರು-ಸಿದ್ದೇನಾಯಕನಹಳ್ಳಿ ಮಧ್ಯೆ ಗುರುರಾಜ ಕಲ್ಯಾಣ ಮಂದಿರದ ಹಿಂಭಾಗದ ರೆಲ್ವೇ ಹಳಿ ಮೇಲೆ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಸುಮಾರು 55 ವರ್ಷ ವಯಸ್ಸಿಯ ವ್ಯಕ್ತಿ ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದು, ಸುಮಾರು 5.5 ಅಡಿ ಎತ್ತರವಿರುವ ಈ ವ್ಯಕ್ತಿ ಸಿಮೆಂಟ್ ಬಣ್ಣದ ಅಂಗಿ ಮತ್ತು ಪ್ಯಾಂಟ್ ಧರಿಸಿದ್ದಾನೆ. ಬಿಳಿ-ಕಪ್ಪು ಮಿಶ್ರಿತ ಕೂದಲು ಹೊಂದಿರುವ ಈತನ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಬಳ್ಳಾಪುರ ರೈಲ್ವೇ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ ಎಂದು ರೇಲ್ವೇ ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾಧ್ಯಕ್ಷರಾಗಿ ವೆಂಕಟನಾರಾಯಣಪ್ಪ
ದೇವನಹಳ್ಳಿ: ಕರ್ನಾಟಕ ರಾಜ್ಯ ರೈತ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ವೆಂಕಟನಾರಾಯಣಪ್ಪ  ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವೆಂಕಟೇಶ್ ತಿಳಿಸಿದ್ದಾರೆ.
ಹೊಸಕೋಟೆ ಬಚ್ಚೇಗೌಡ- ಗೌರವಾಧ್ಯಕ್ಷ, ದೊಡ್ಡಬಳ್ಳಾಪುರ ಮುತ್ತೇಗೌಡ- ಕಾರ್ಯಾಧ್ಯಕ್ಷ, ದೇವನಹಳ್ಳಿ ಆರ್. ಮುನಿಶಾಮಪ್ಪ ಹಾಗೂ ದೊಡ್ಡಬಳ್ಳಾಪುರ ಟೈಲರ್ ಮುನಿರಾಜು - ಉಪಾಧ್ಯಕ್ಷರುಗಳು, ದೇವನಹಳ್ಳಿ ವೆಂಕಟೇಶ್ ಹಾಗೂ ಹೊಸಕೋಟೆ ಚನ್ನಕೇಶವ - ಪ್ರಧಾನ ಕಾರ್ಯದರ್ಶಿಗಳು, ನೆಲಮಂಗಲ ಹನುಮಂತರಾಜು - ಜಂಟಿ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ ವೆಂಕಟನಾರಾಯಣಪ್ಪ ಎಲ್ಲ ರೈತ ಬಾಂಧವಿವರಿಗೆ  ಸಂಕ್ರಾತಿ ಶುಭಾಶಯ ಕೋರಿದ್ದಾರೆ.
ಎಲ್ಲರಿಗೂ ಆದರ್ಶ ವಿವೇಕಾನಂದ
ಕನಕಪುರ: ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತೀಯ ಸಂಸ್ಕೃತಿ, ಪರಂಪರೆ, ಮಹತ್ವಗಳ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳ ಕಣ್ತೆರೆಸಿದ ಸ್ವಾಮಿ ವಿವೇಕಾನಂದರು, ದೇಶ, ಕಾಲ, ವಯೋವುತಿಗಳಿಲ್ಲದೆ ಎಲ್ಲವರ್ಗದ ಜನರಿಗೂ ಯುವಕರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು ಗಣಕತಂತ್ರಜ್ಞ ಮುರಳೀಧರ ಹೇಳಿದ್ದಾರೆ.
ಅವರು ಕನಕಪುರದ ಗ್ರಾಮವಿದ್ಯಾ ಪ್ರಚಾರಕ ಸಂಘ ವತಿಯಿಂದ ಇಲ್ಲಿನ ಕರ್ಮಯೋಗಿ ಎಸ್.ಕರಿಯಪ್ಪ ಸಮಾಧಿಸ್ಥಳದ ಬಳಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯಲ್ಲಿ ಅತಿಥಿ ಭಾಷಣಕಾರರಾಗಿ ಮಾತನಾಡುತ್ತಿದ್ದರು. ಸಂಸ್ಥೆಯ ಅಧ್ಯಕ್ಷ ಕೆ.ಜಿ.ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಶಾಲಾಮಕ್ಕಳಿಗೆ ವಿವೇಕಾನಂದ ವೇಷಭೂಷಣ ಸ್ಪರ್ಧೆ ಏರ್ಪಡಿಸಿ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಹಾಗೂ ಸ್ವಾಮಿ ವಿವೇಕಾನಂದರ ತತ್ವ ಸಿದ್ಧಾಂತ, ಬದುಕು ಬರಹಗಳ ಬಗ್ಗೆ ಕಿರುಭಾಷಣಗಳನ್ನು ನೀಡಿ ನೆರೆದಿದ್ದ ಸಾವಿರಾರು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
'ರಸ್ತೆ ಅಭಿವೃದ್ಧಿಗೆ ರು. 95 ಲಕ್ಷ ಬಿಡುಗಡೆ'
ಸೂಲಿಬೆಲೆ: ಹೊಸಕೋಟೆ ತಾಲೂಕಿನ ನಾನಾ ಗ್ರಾಮಗಳಲ್ಲಿರುವ ರಸ್ತೆಗಳ ಅಭಿವೃದ್ಧಿಗೆ ಸರ್ಕಾರದಿಂದ ರು.95 ಲಕ್ಷ ಹಣ ಬಿಡುಗಡೆಯಾಗಿದೆ ಎಂದು ಶಾಸಕ ಎನ್. ನಾಗರಾಜ್ ತಿಳಿಸಿದ್ದಾರೆ. ನಂದಗುಡಿ ಹೋಬಳಿ ಇಟ್ಟಸಂದ್ರ  ಗ್ರಾಪಂದ ಈಸ್ತೂರು ಹೊಸಹಳ್ಳಿ ಗ್ರಾಮದಲ್ಲಿ ರು.5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ  ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನಡೆಸಿ ಅವರು ಮಾತನಾಡಿದರು. ಹೊಸಕೋಟೆ ಕ್ಷೇತ್ರದ ನಾನಾ ಗ್ರಾಮಗಳಲ್ಲಿ ಶಾಸಕರ ಅನುದಾನದಡಿಯಲ್ಲಿ ಕೈಗೊಳ್ಳಲಿರುವ ಕಾಮಗಾರಿಗಳಿಗೆ  ಹಣ ಬಿಡುಗಡೆಯಾಗಿದ್ದು ಪ್ರತಿಯೊಂದು ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡಲು ತಲಾ ರು.5 ಲಕ್ಷವನ್ನು ಹಣವನ್ನು ನೀಡಲಾಗುವುದು.ಇದರಿಂದ 8 ರಿಂದ 10 ಅಡಿ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗಲಿವೆ. ಮೊದಲ ಹಂತವಾಗಿ ಈಸ್ತೂರು ಗ್ರಾಮದಲ್ಲಿ ಶಂಕುಸ್ಥಾಪನೆ ನಡೆಸಿದ್ದು, ಇನ್ನೂ 16 ಗ್ರಾಮಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಕುಡಿಯುವ ನೀರಿಗೆ ಮನವಿ: ಶಾಸಕರು ಗುದ್ದಲಿಪೂಜೆ ಆಗಮಿಸಿದ್ದ ಕಂಡು ಈಸ್ತೂರು ಗ್ರಾಮದ ಸನಿಹದಲ್ಲಿರುವ ರಾಳುಕುಂಟೆ ಗ್ರಾಮಸ್ಥರು, ತಮ್ಮ ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಕೊಳುವೆ ಬಾವಿ ಕೊರೆಯಿಸಿದ್ದು, ಇದಕ್ಕೆ ಅಗತ್ಯವಾಗಿರುವ ಪಂಪ್ ಸೆಟ್ ಆಳವಡಿಸಿಲ್ಲ.ಕೊಳವೆ ಬಾವಿ ಕೊರೆಯಿಸಿ 6 ತಿಂಗಳಾದರೂ ನೀರಿಲ್ಲದೆ ಜನ, ಜಾನುವಾರುಗಳಿಗೆ ಸಮಸ್ಯೆಯಾಗಿದೆ ಎಂದು ಶಾಸಕರು ಬಳಿ ಸಮಸ್ಯೆಯನ್ನು ತೋಡಿಕೊಂಡರು.ಅಲ್ಲೇ ಇದ್ದ ಜಿಪಂ ಸಹಾಯಕ ಕಾರ್ಯಪಾಲಕ ಚಂದ್ರಶೇಖರಪ್ಪ ಅವರನ್ನು ಕರೆಯಿಸಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement