ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹಿಂದೂ ಎಂದು ಹೆಮ್ಮೆಯಿಂದ ಘರ್ಜಿಸಿ: ಕಲ್ಲಡ್ಕ ಪ್ರಭಾಕರ ಭಟ್ಟ

Vishwanath S
Updated On : 15 Jan 2014, 1:22 am

ಆನೇಕಲ್ಲು: ಸನಾತನ ಸಂಸ್ಕೃತಿ ಸಂಪ್ರದಾಯದ ಭದ್ರವಾದ ಅಡಿಪಾಯ ಹೊಂದಿರುವ ಭಾರತಾಂಬೆಯ ಮಕ್ಕಳೇ ನಾನೊಬ್ಬ ಹಿಂದೂ ಎಂದು ಹೆಮ್ಮೆಯಿಂದ ಘರ್ಜಿಸಿ ಎಂದು ದಕ್ಷಿಣ ಭಾರತ ಆರ್‌ಎಸ್‌ಎಸ್ ಸಂಚಾಲಕ ಕಲ್ಲಡಕ ಪ್ರಭಾಕರ ಭಟ್ಟ ಕರೆ ನೀಡಿದ್ದಾರೆ.
ಅವರು ತಾಲೂಕಿನ ಬಿದರಗುಪ್ಪೆಯಲ್ಲಿ ನಡೆದ ಆರ್‌ಎಸ್‌ಎಸ್ ಜಿಲ್ಲಾ ಸಾಂಘಿಕ ಸಭೆಯಲ್ಲಿ ಸಹಸ್ರಾರು ಗಣವೇಶಧಾರಿಗಳನ್ನು ಉದ್ದೇಶಿಸಿ ಮಾತನಾಡಿ ದಾಸ್ಯದಿಂದ ಹೊರಬಂದ ಭಾರತಾಂಬೆಯನ್ನು ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವನ್ನಾಗಿಸುವ ಜವಾಬ್ದಾರಿ ಯುವ ಜನತೆಯ ಮೇಲಿದೆ. ಅಖಂಡ ಹಿಂದೂಸ್ಥಾನ ಕಲ್ಪನೆಯನ್ನು ಯುವ ಪೀಳಿಗೆಗೆ ಅರ್ಥೈಸಬೇಕಿದೆ. ನಮ್ಮನ್ನಾಳುವ ಜನ ಪ್ರತಿನಿಧಿಗಳಿಗೆ ದೇಶಭಕ್ತಿ ಎಂಬುದು ಮರೆತು ಸ್ವಹಿತಾಸಕ್ತಿ ಸ್ವಾರ್ಥ ತಾಂಡವವಾಡುತ್ತಿದೆ. ಮತ ಬ್ಯಾಂಕ್, ಅಲ್ಪ ಸಂಖ್ಯಾತರ ತುಷ್ಟೀಕರಣದಲ್ಲಿ ದೇಶವನ್ನು ಅತಂತ್ರ ಸ್ಥಿತಿಗೆ ತರುತ್ತಿದ್ದಾರೆ. ಬಹು ಸಂಖ್ಯಾತ ಹಿಂದೂಗಳನ್ನು ನಿರ್ಲಕ್ಷಿಸಿ ದೇಶವನ್ನು ಮತ್ತೆ ದಾಸ್ಯ ಹಾಗೂ ಗುಲಾಮಗಿರಿಗೆ ತರುವ ಹುನ್ನಾರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಗೋ ಮುಖ ವ್ಯಾಘ್ರ: ಕಾಶ್ಮೀರದಿಂದ ಹೊರದೂಡಲ್ಪಟ್ಟ ಹಿಂದೂ ನಿರಾಶ್ರಿತರಿಗೆ ಇಂದಿಗೂ ಸ್ಪಷ್ಟವಾದ ನೆಲೆಯನ್ನು ಕರುಣಿಸದ ಕಾಂಗ್ರೆಸ್ ಸರ್ಕಾರ ಬಾಂಗ್ಲಾದಿಂದ ನುಸುಳಿಬಂದ ಪಾತಕರಿಗೆ ನೆಲೆ ನೀಡಲು ಮುಂದಾಗಿರುವುದು ದೇಶದ ದೌರ್ಭಾಗ್ಯ ಎಂದು ಬಣ್ಣಿಸಿದ ಅವರು ನುಸುಳುಕೋರರಿಂದ ದೇಶಕ್ಕೆ ಆಪತ್ತಿದೆ.
 ಈ ಕೂಡಲೇ ಬಾಂಗ್ಲಾ ಹಾಗೂ ಪಾಕಿಸ್ತಾನಿಗಳನ್ನು ದೇಶ ಬಿಟ್ಟು ತೊಲಗಲು ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ದೇಶಕ್ಕೆ ಬಂದಿರುವ ಆಪತ್ತನ್ನು ಎದುರಿಸಲು ಕಾಂಗ್ರೆಸ್ ಪಕ್ಷದಿಂದ ಸರ್ವಥಾ ಸಾಧ್ಯವಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement