ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿವೇಕಾನಂದರ ಆದರ್ಶ ಗುಣ ಅಳವಡಿಸಿಕೊಳ್ಳಿ

Vishwanath S
Updated On : 16 Jan 2014, 1:42 am

ಸೂಲಿಬೆಲೆ: ವಿವೇಕಾನಂದರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ಅಭ್ಯಸಿಸಿ ಅವರ ಅದರ್ಶ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವ  ಮೂಲಕ ಸಮಾಜದ ಪರಿವರ್ತನೆಗೆ ಕಾರಣರಾಗಬೇಕು. ದೇಶಿಯ ನಾಯಕರ ಚಿಂತನೆಗಳು ಈಗಿನ ಕಾಲದ ವಿದ್ಯಾರ್ಥಿಗಳು ಹೆಚ್ಚಾಗಿ ಅರಿತುಕೊಳ್ಳಬೇಕು ಎಂದು ವಿವೇಕಾನಂದ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಾರಾಯಣಸ್ವಾಮಿ ಹೇಳಿದ್ದಾರೆ.
ನಂದಗುಡಿಯ ಚೊಕ್ಕಸಂದ್ರ ಗ್ರಾಮದಲ್ಲಿ  ಸ್ವಾಮಿ ವಿವೇಕಾನಂದರ  ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ನನ್ನ ನಡಿಗೆ ಆಶ್ರಮದೆಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಂದಗುಡಿ ಗ್ರಾಪಂ ಅಧ್ಯಕ್ಷ ಸವಿತಾ ರಾಜಶೇಖರ್, ವಿದ್ಯಾರ್ಥಿಗಳು ದೇಶಕ್ಕೆ ತ್ಯಾಗ ಮಾಡಿದ ನಾಯಕರ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕು ಎಂದರು.
ಇದಕ್ಕೂ ಮುನ್ನ ಟ್ರಸ್ಟ್ ವತಿಯಿಂದ ಕಾಲ್ನಡಿಗೆ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸೂಲಿಬೆಲೆಯ ಪರಮಹಂಸ ನಿಲಯದಲ್ಲಿರುವ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಸುಮಾರು 5-6 ಗ್ರಾಮಗಳ ಮೂಲಕ ಚೊಕ್ಕಸಂದ್ರಕ್ಕೆ ಜಾಥಾ ನಡೆಸಲಾಯಿತು. ಡೊಳ್ಳು ಕುಣಿತ, ಭರತ್ಯ ನಾಟ ಇತ್ಯಾದಿ ಕಾರ್ಯಕ್ರಮಗಳು  ಜನರ ಗಮನ ಸೆಳೆಯಿತು. ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸಲಾಯಿತು. ಕಸಾಪ ತಾ.ಅಧ್ಯಕ್ಷ ಶ್ರೀಕಾಂತ್, ಪ್ರಿಯ ವೆಂಕಟೇಶ್ ತಿಲಕ್, ಪದ್ಮನಾಭ, ವೇಣು, ಸುಮಿತ್ರ, ದೊಡ್ಡನಾರಾಯಣಪ್ಪ, ಮೂರ್ತಿ, ಗಂಗಾಧರ ಹಾಗೂ ಟ್ರಸ್ಟ್ ಪದಾಧಿಕಾರಿಗಳು ಹಾಜರಿದ್ದರು.್ಙ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement