ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಾಲಾ ಮಕ್ಕಳಿಂದ ವಂದೇ ಮಾತರಂ ಯಕ್ಷಗಾನ

Vishwanath S
Updated On : 16 Jan 2014, 1:42 am

ದೊಡ್ಡಬಳ್ಳಾಪುರ: ಬಯಲುಸೀಮೆಯ ಶಾಲಾ ಮಕ್ಕಳು ಕರಾವಳಿಯ ಹೆಸರಾಂತ ಜಾನಪದ ಕಲೆಯನ್ನು ತಮ್ಮದೇ ಆದ ರೀತಿಯಲ್ಲಿ ಪ್ರದರ್ಶಿಸುವ ಯಶಸ್ವಿ ಪ್ರಯತ್ನ ಮಾಡಿದರು.
 ಇಲ್ಲಿನ ಕೆ.ಗೋಪಾಲಕೃಷ್ಣ ಎಜುಕೇಶನಲ್ ಟ್ರಸ್ಟ್‌ನ ಜಿ.ಕೆ. ಮತ್ತು ಪದ್ಮಾ ವಿದ್ಯಾನಿಕೇತನ ಶಾಲೆಗಳಲ್ಲಿ ನಡೆದ ವೈಭವೋತ್ಸವ-2014 ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕವೇ ಗಮನ ಸೆಳೆಯಿತು.
ಬಂಕಿಮಚಂದ್ರರ ಪ್ರಸಿದ್ಧ ಗೀತೆ ವಂದೇ ಮಾತರಂಗೆ ಯಕ್ಷಗಾನ ರೂಪಕ ಸಂಯೋಜನೆ ಮಾಡಲಾಗಿತ್ತು. 4 ಜನ ಮಕ್ಕಳು ಯಕ್ಷಗಾನದ ಮಟ್ಟುಗಳನ್ನು ಗಮನ ಸೆಳೆಯುವ ರೀತಿಯಲ್ಲಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು.
ಅದೇ ರೀತಿ ಕುವೆಂಪು ವಿರಚಿತ ನಾಡಗೀತೆ ಜಯಭಾರತ ಜನನಿಯ ತನುಜಾತೆ ಹಾಡಿಗೆ ಸಾಂಸ್ಕೃತಿಕ ವೈವಿಧ್ಯತೆಯನ್ನು ಬಿಂಬಿಸುವ ಸಮೂಹ ನೃತ್ಯ ಸಂಯೋಜಿಸಲಾಗಿತ್ತು. ಹಲವು ವಿನೂತನ ಪ್ರಯೋಗಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆಚ್ಚುಗೆಗೆ ಪಾತ್ರವಾದವು.
ಕಾರ್ಯಕ್ರಮವನ್ನು ತಾಲೂಕು ಸಮಾಜಕಲ್ಯಾಣಾಧಿಕಾರಿ ಎನ್. ಹನುಮಂತರಾಯಪ್ಪ ಉದ್ಘಾಟಿಸಿ ಮಾತನಾಡಿ, ಮಕ್ಕಳ ಸೃಜನಶೀಲತೆಗೆ ಹೆಚ್ಚಿನ ಮನ್ನಣೆ ನೀಡುವಂತೆ ಸಲಹೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಕೆ.ಜಿ. ರಘುರಾಂ ಅಧ್ಯಕ್ಷತೆ ವಹಿಸಿದ್ದರು. ಗಾಯತ್ರಿಪೀಠ ಮಿತ್ರಬಳಗ ಅಧ್ಯಕ್ಷ ಎಸ್.ಶಿವಾನಂದ್, ದೇವಾಂಗ ಮಂಡಲಿ ನಿರ್ದೇಶಕ ಕೆ.ಜಿ.ದಿನೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ತಿಮ್ಮೇಗೌಡ, ಕಾಂಗ್ರೆಸ್ ಮುಖಂಡ ಕೆ.ಜಿ.ಅಶೋಕ್, ಆನಂದ್, ಮುಖ್ಯ ಶಿಕ್ಷಕಿ ಉಷಾರಾಣಿ ಮತ್ತಿತರರು ಭಾಗವಹಿಸಿದ್ದರು. ವಿವಿಧ ಸಾಂಸ್ಕೃತಿಕ, ಕ್ರೀಡಾ ಮತ್ತು ಶೈಕ್ಷಣಿಕ ಸಾಧನೆಗಳನ್ನು ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement