ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಫುಟ್ಪಾತ್ ವ್ಯಾಪಾರ ತೆರವು

Vishwanath S
Updated On : 19 Jan 2014, 1:25 am

ಚನ್ನಪಟ್ಟಣ: ಪಟ್ಟಣದ ಅಂಚೇ ಕಚೇರಿ ರಸ್ತೆ ಮತ್ತು ಎಂ.ಜಿ. ರಸ್ತೆಯಲ್ಲಿನ ಫುಟ್ಪಾತ್ ವ್ಯಾಪಾರವನ್ನು ಶನಿವಾರ ಮುಂಜಾನೆ ನಗರಸಭೆ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ತೆರವು ಗೊಳಿಸಿದರು.
ನಗರಸಭೆ ಫುಟ್ಪಾತ್ ವ್ಯಾಪಾರವನ್ನು ನಿಷೇಧಿಸಿ ಹಣ್ಣು, ಹೂ ಮತ್ತು ತರಕಾರಿ ಮಾರಾಟಗಾರರಿಗೆ ಕರಬಲ ಮೈದಾನದಲ್ಲಿ ಪ್ರತ್ಯೇಕ ಅಂಗಡಿ ಮಳಿಗೆಗಳನ್ನು ನಿರ್ಮಿಸಿದೆಯಾದರೂ ಅಕ್ರಮವಾಗಿ ಫುಟ್ಪಾತ್ ವ್ಯಾಪಾರ ಮುಂದುವರೆದ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿ ಎದುರಾಗಿತ್ತು. ಈ ಹಿಂದೆ ಹಲವಾರು ಬಾರಿ ನಗರಸಭೆ ಸಿಬ್ಬಂದಿ ತೆರವು ಗೊಳಿಸುವ ಕಾರ್ಯಾಚರಣೆ ಹಮ್ಮಿ ಕೊಂಡಿದ್ದರಾದರೂ, ಈ ದಾಳಿಗಳಿಗೆ ಕವಡೆಕಾಸಿನ ಕಿಮ್ಮತ್ತು ನೀಡದ ವ್ಯಾಪಾರಿಗಳು ಮತ್ತೆ ವ್ಯಾಪಾರ ಆರಂಭಿಸಿದ್ದರು. ನಗರಸಭೆ ಮತ್ತು ಫುಟ್ಪಾತ್ ವ್ಯಾಪಾರಿಗಳ ನಡುವೆ ಕಳೆದ 5 ವರ್ಷಗಳಿಂದ ತೆರವು ಕಾರ್ಯಾಚರಣೆಯ ಕಣ್ಣಾಮುಚ್ಚಾಲೆ ನಡೆಯುತ್ತಲೇ ಇದೆ.  ಶನಿವಾರ ನಡೆದ ಕಾರ್ಯಾಚರಣೆಗೆ ನಗರಸಭಾ ಸದಸ್ಯರು ಸಾಥ್ ನೀಡಿದರು. ಅಧಿಕಾರಿಯೊಂದಿಗೆ ಬೆಂಬಲಕ್ಕೆ ನಿಂತ 15ಕ್ಕೂ ಹೆಚ್ಚು ನಗರಸಭಾ ಸದಸ್ಯರು ಕಾರ್ಯಾಚರಣೆಗೆ ಬೆಂಬಲ ನೀಡಿದರು. ಬಾಲಕಿಯರ ಕಾಲೇಜಿನ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು, ವಾಹನಗಳು ಫುಟ್ಪಾತ್ ವ್ಯಾಪಾರದಿಂದಾಗಿ ತಿರುಗಾಡಲು ಸಾಧ್ಯವಾಗದಂತಾಗಿದೆ. ಫುಟ್ಪಾತ್ ವ್ಯಾಪಾರದಿಂದ ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿಯಾಗಿ ನಾವೆಲ್ಲ ನಿಯಂತ್ರಣ ಹಾಕಲೇ ಬೇಕಿದೆ ಎಂದು ನಗರಸಭಾ ಸದಸ್ಯ ಜೆಸಿಬಿ ಲೋಕೇಶ್ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement