ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕ್ಷೀರಭಾಗ್ಯ: ಕೆಜಿಗೆ ರು. 190 ದರದಲ್ಲಿ ಹಾಲಿನ ಪುಡಿ ಸರಬರಾಜು

Vishwanath S
Updated On : 19 Jan 2014, 1:25 am

ಹೊಸಕೋಟೆ : ಬೆಂಗಳೂರು ಹಾಲು ಒಕ್ಕೂಟ ರಾಜ್ಯ ಸರಕಾರ ಜಾರಿಗೊಳಿಸಿರುವ ಕ್ಷೀರಭಾಗ್ಯ ಯೋಜನೆಗೆ ತಿಂಗಳಿಗೆ 150ಟನ್ ಹಾಲಿನ ಪುಡಿಯನ್ನು ಕೆಜಿಗೆ 190 ರು.ದರದಲ್ಲಿ ಸರಬರಾಜು ಮಾಡುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಸಿ.ಮಂಜುನಾಥ್ ಹೇಳಿದರು.
ಪಟ್ಟಣದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಏರ್ಪಡಿಸಿದ್ದ ಉತ್ತಮ ರಾಸುಗಳಿಗೆ ಬಹುಮಾನ ಹಾಗೂ ಪಶು ಆಹಾರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಒಕ್ಕೂಟದ ವ್ಯಾಪ್ತಿಯಲ್ಲಿನ ಸಹಕಾರ ಸಂಘಗಳಿಂದ ಪ್ರತಿದಿನ 11.5ಲಕ್ಷ ಲೀ.ನಷ್ಟು ಹಾಲು ಸಂಗ್ರಹಗೊಳ್ಳುತ್ತಿದ್ದು, 9.25ಲಕ್ಷ ಲೀ. ಗಳಷ್ಟು ಮಾತ್ರ ಮಾರಾಟಗೊಳ್ಳುತ್ತಿದೆ ಎಂದು ತಿಳಿಸಿದರು.ಉತ್ಪಾದಕರಿಗೆ ಜ.1ರಿಂದ ಖರೀದಿ ದರವನ್ನು 2 ರೂ.ಗಳಷ್ಟು ಹೆಚ್ಚಿಗೆ ಪಾವತಿ ಮಾಡುತ್ತಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ವೇತನವನ್ನು ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಮಾತನಾಡಿ, ರೈತರು ರಾಸುಗಳ ಪೋಷಣೆಯಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಸ್ವಂತ ಆರೋಗ್ಯಕ್ಕೆ ನೀಡುವಷ್ಟೆ ಪ್ರಾತಿನಿಧ್ಯವನ್ನು ರಾಸುಗಳಿಗೂ ನೀಡಬೇಕು. ವೇದಿಕೆಯ ತಾಲೂಕು ಸಮಿತಿ ರೈತರಿಗೆ ಇಂತಹ ಉಪಯುಕ್ತ ಕೊಡುಗೆ ನೀಡುತ್ತಿರುವುದು ಅಭಿನಂದನಾರ್ಹ ಎಂದರು. ಪಟ್ಟಣ ಹಾಗೂ ಸುತ್ತಮುತ್ತಲಿನ ಸುಮಾರು 3200 ರಾಸುಗಳಿಗೆ ಆಹಾರ, 10 ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement