ಶೂದ್ರ ಸಮುದಾಯಕ್ಕೆ ಆಧ್ಯಾತ್ಮಿಕ ಬೆಳಕು ತೋರಿದ ಆದಿಶ್ರೀ
ಚನ್ನಪಟ್ಟಣ: ಶೂದ್ರ ಸಮುದಾಯಕ್ಕೆ ಆಧ್ಯಾತ್ಮಿಕ ಬೆಳಕು ತೋರುವ ಜತೆಗೆ ಜ್ಞಾನದ ಬೀಜ ಬಿತ್ತಿದ ಮಹಾಪುರುಷ ಬಾಲಗಂಗಾಧರನಾಥ ಶ್ರೀಗಳು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಶಿವಪ್ಪ ಬಣ್ಣಿಸಿದರು. ಇಲ್ಲಿನ ಸಾರ್ವಜನಿಕ ವಿದ್ಯಾಸಂಸ್ಥೆಯಲ್ಲಿ ವಿಶ್ವದರ್ಶಿನಿ ಸೇವಾಸಂಸ್ಥೆ ಹಮ್ಮಿ ಕೊಂಡಿದ್ದ ಬಾಲಗಂಗಾಧರನಾಥ ಶ್ರೀಗಳ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀಗಳು ಈ ನಾಡಿನ ಶೈಕ್ಷಣಿಕ, ಆಧ್ಯಾತ್ಮಿಕ, ಸಾಮಾಜಿಕ ಕ್ಷೇತ್ರದ ಜತೆಗೆ ಪರಿಸರದ ಅಭಿವೃದ್ಧಿಗೆ ಸಾಕಷ್ಟುಕೊಡುಗೆ ನೀಡಿದ್ದಾರೆ ಎಂದರು.
ನಮ್ಮನಿಮ್ಮ ನಡುವಿನ ಮಹಾಪುರುಷ ನಮ್ಮಿಂದ ಕಣ್ಮರೆಯಾಗಿ ಒಂದು ವರ್ಷ ತುಂಬಿದೆ. ಸಮಾಜದ ಕೆಳವರ್ಗದ ಮಂದಿಗೆ ಉತ್ತಮ ಶಿಕ್ಷಣ ದೊರಕಿಸಲು ಶ್ರೀಗಳು ತಮ್ಮಜೀವಮಾಣ ಪೂರ ಶ್ರಮಿಸಿದ್ದು, ಕೇವಲ ಒಂದು ಸಮುದಾಯಕ್ಕೆ ಮೀಸಲಾಗದ ಶ್ರೀಗಳು ಎಲ್ಲಾ ವರ್ಗದ ನೊಂದವರ ಕಣ್ಣೀರು ಒರೆಸುವ ಕಾರ್ಯ ಮಾಡಿ ಪರಮಾತ್ಮನಲ್ಲಿ ಲೀನವಾದರು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಭಿಕ್ಷಾಟನೆಯ ಮೂಲಕ ಮಠ ನಿರ್ಮಿಸಿದ ಅವರು ಆದಿಚುಂಚನಗಿರಿ ಮಹಾಸಂಸ್ಥಾನ ಇಂದು ವಿಶ್ವ ವಿಖ್ಯಾತ ಗೊಂಡಿದೆ ಎಂದಾದಲ್ಲಿ ಅದು ಬಾಲಗಂಗಾಧರನಾಥ ಶ್ರೀಗಳ ಕೊಡುಗೆಯಿಂದ ಎಂದು ಸ್ಮರಿಸಿ ಕೊಂಡರು.
ಅಂಧರ ಶಾಲೆ ನಿರ್ಮಾಣ, ಅನ್ನ ಮತ್ತು ಅಕ್ಷರ ದಾಸೋಹಗಳನ್ನು ಜಾರಿಗೆ ತಂದ ಶ್ರೀಗಳನ್ನು ನಾವೆಲ್ಲ ನಿರಂತರವಾಗಿ ಸ್ಮರಿಸುವ ಕೆಲಸ ಮಾಡಬೇಕಿದ್ದು ಶ್ರೀಗಳು ತೋರಿಸಿದ ಮಾರ್ಗದಲ್ಲಿ ನಾವೆಲ್ಲ ಮುನ್ನಡೆಯ ಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಯು.ಪಿ.ಧರಣೀಶ್, ಯುವಕಾಂಗ್ರೆಸ್ ಅಧ್ಯಕ್ಷ ಮಲ್ಲೇಶ್, ಪಿ.ಡಿ.ರಾಜು, ಉಪಪ್ರಾಂಶುಪಾಲ ಎಂ.ಶಿವರಾಮಯ್ಯ, ಮೋಹನ್‌ಕುಮಾರ್, ಸಂಸ್ಥೆಯ ಶಿಕ್ಷಕ ಡಿ.ಪುಟ್ಟಸ್ವಾಮಿಗೌಡ ಇನ್ನೂ ಮುಂತಾದವರು ಉಪಸ್ಥಿತರಿದ್ದರು.