ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವೈದ್ಯರ ಸಲಹೆಯಂತೆ ನಡೆದರೆ ಆರೋಗ್ಯಪೂರ್ಣ ಜೀವನ ಸಾಧ್ಯ

Rashmi Kasaragodu
Updated On : 21 Jan 2014, 1:31 am

ಮಾಗಡಿ: ವೈದ್ಯರ ಸಲಹೆಯಂತೆ ನಡೆದರೆ ಆರೋಗ್ಯಪೂರ್ಣ ಜೀವನ ಸಾಧ್ಯವಿದೆ ಎಂದು ಬಿಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎಚ್.ಎನ್. ಅಶೋಕ ನುಡಿದರು.
ಅವರು ತಾಲೂಕಿನ ಕುದೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬೆಂಗಳೂರಿನ ಭಗವಾನ್  ಮಹಾವೀರ್ ಜೈನ್  ಆಸ್ಪತ್ರೆ, ಬೆಂಗಳೂರು ಹಾಲು ಒಕ್ಕೂಟ ಮತ್ತು ಎಚ್.ಸಿ. ಬಾಲಕೃಷ್ಣ ಅಭಿಮಾನಿ ಬಳಗ ಸಂಯುಕ್ತವಾಗಿ ಏರ್ಪಡಿಸಿದ್ದ ಉಚಿತ ಹೃದಯ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರದ ಕಾರ್ಯಕ್ರಮವನ್ನು
ಉದ್ಘಾಟಿಸಿ ಮಾತನಾಡಿ, ಆಧುನಿಕ ಸಮಾಜದಲ್ಲಿ ಮನುಷ್ಯ ಸುಖ ಜೀವನವನ್ನೇ ಹೆಚ್ಚು ಬಯಸುತ್ತಿದ್ದಾನೆ. ಆತನಿಗೆ ಸಂಸ್ಕಾರವಂತ ಜೀವನ ಬೇಕಾಗಿಲ್ಲ, ಸಂಸ್ಕೃತಿ ಬಗ್ಗೆ ಚಿಂತನೆಯಿಲ್ಲ, ಒತ್ತಡ ಬದುಕು,  ಶ್ರಮವಿಲ್ಲದೆ ಜೀವಿಸುವುದು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರಿಗೆ ಹೃದಯ
ತೊಂದರೆಗಳು ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿರುವುದು ನೋಡಿದರೆ, ಸಣ್ಣ ವಯಸ್ಸಿಗೆ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿತ್ಯ ಮುಂಜಾನೆ ಮತ್ತು ಸಂಜೆ ಕಡ್ಡಾಯವಾಗಿ ವ್ಯಾಯಾಮ, ಯೋಗ, ಮಾಡುವುದನ್ನು ರೂಡಿಸಿಕೊಂಡರೆ ಹೃದಯ ತೊಂದರೆಯಿಂದ ದೂರ ಉಳಿಯಬಹುದು ಎಂದು ಅಭಿಪ್ರಾಯಪಟ್ಟರು. ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ ಪ್ರತಿ 2 ತಿಂಗಳಿಗೊಮ್ಮೆ ಗ್ರಾಮೀಣ ಭಾಗದ ಬಡ ಜನರಿಗೆ ಆರೋಗ್ಯ ತಪಾಸಣೆ ಶಿಬಿರ ನಡೆಸುವುದು ಅಗತ್ಯವಿದೆ. ವಿವಿಧ ಸಂಘ, ಸಂಸ್ಥೆಗಳು ಇಂತಹ ಶಿಬಿರಗಳಿಗೆ ಒತ್ತು ನೀಡಿದರೆ ಗ್ರಾಮೀಣ ಭಾಗದ ಜನತೆ ಆರೋಗ್ಯವಂತರಾಗಿ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದರು. ಬೆಂಗಳೂರಿನ ಭಗವಾನ್ ಮಹಾವೀರ್ ಜೈನ್  ಆಸ್ಪತ್ರೆಯ ಡಾ. ವೆಂಕಟೇಶಲು, ಡಾ. ನಾಗವೇಣಿ ತಂಡದವರು ಶಿಬಿರವನ್ನು ನಡೆಸಿಕೊಟ್ಟರು.
ಸುಮಾರು 250ಕ್ಕೂ ಹೆಚ್ಚು ಮಂದಿ ಹೃದಯ ಉಚಿತ ತಪಾಸಣೆ ನಡೆಸಿದರು. 80ಕ್ಕೂ ಹೆಚ್ಚು ಮಂದಿಗೆ ಇಸಿಜಿ, ರಕ್ತದೊತ್ತಡ ಇತರೆ ಪರೀಕ್ಷೆಗಳನ್ನು ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement