ರಾಷ್ಟ್ರೀಯ ಮಾನವ ಹಕ್ಕು ಪರಿಷತ್ನ ತರಬೇತಿ
ಮಾಗಡಿ: ಮಾನವ ಹಕ್ಕು ಆಯೋಗಕ್ಕೆ ಅಧ್ಯಕ್ಷರಿಲ್ಲ ಎಂಬ ಕಾರಣಕ್ಕಾಗಿಯೇ ಆಯೋಗವು ದುರ್ಬಲವೆಂದು ಕಡೆಗಣಿಸುವುದು ಸರಿಯಾದ ಕ್ರಮವಲ್ಲ ಎಂದು ಮಾನವ ಹಕ್ಕು ಆಯೋಗದ ಸದಸ್ಯ ನಿವೃತ್ತ ನ್ಯಾಯಾಧೀಶ ಚಂದ್ರಶೇಖರ್ ಹುನಗುಂದ ತಿಳಿಸಿದರು.
ಅವರು ತಾವರೆಕೆರೆ ಹೋಬಳಿ ಚನ್ನೇನಹಳ್ಳಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕು ಪರಿಷತ್ನ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಆಯೋಗಕ್ಕೆ ಅಧ್ಯಕ್ಷರಿಲ್ಲವೆಂದು ಆಯೋಗವು ಸುಮ್ಮನೆ ಕುಳಿತ್ತಿಲ್ಲ, ಸಕ್ರಿಯಾವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ ಎಂದರು.
ವಕೀಲರಾದ ಪ್ರಮೀಳಾ ನೇಸರ್ಗಿ, ರಾಷ್ಟ್ರೀಯ ಮಾನವ ಹಕ್ಕು ಪರಿಷತ್ನ ರಾಷ್ಟ್ರಾಧ್ಯಕ್ಷ ಡಾ.ಬಿ.ಜೆ.ಎಂ. ರೆಡ್ಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾನವ ಹಕ್ಕುಗಳ ಕೈಪಿಡಿಯನ್ನು ರಾಬರ್ಟ್ ಡಿ ಸೋಜಾ, ನಿವೃತ್ತ ನ್ಯಾಯಾಧೀಶ ಚಂದ್ರಶೇಖರ್ ಹುನಗುಂದ ಲೋಕಾರ್ಪಣೆ ಮಾಡಿದರು.
ರಶೀ, ಓಜಾ, ಸುಶೀಲಮ್ಮ, ಕೋದಂಡರಾಮ, ಸತ್ಯನಾರಾಯಣ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.