'ರಂಗ ಶಿಕ್ಷಣ ಸಮಾಜದ ನ್ಯೂನತೆಗೆ ಅಸ್ತ್ರ'
ನೆಲಮಂಗಲ: ರಂಗ ಶಿಕ್ಷಣ ಎಂಬುದು ಒಂದು ಪ್ರಬಲವಾದ ಸಾಂಸ್ಕೃತಿಕ ಕಲೆಯಾಗಿದ್ದು ಸಮಾಜದ ನೂನ್ಯತೆಗಳನ್ನು ಸರಿಪಡಿಸುವ ಅಸ್ತ್ರವಾಗಿದೆ ಎಂದು ಲೋಕೋಪಯೋಗಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಹೇಳಿದರು.
ಅವರು ಪಟ್ಟಣದ ಸೊಂಡೆಕೊಪ್ಪ ಸರ್ಕಲ್ನ ಹರ್ಷ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ರಂಗ ಶಿಕ್ಷಣ ಕೇಂದ್ರದ 19ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಯಾರು ಹೊಣೆ ಎಂಬ ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ ಮಾತನಾಡಿ,ಉಪನಗರದಂತ ನೆಲಮಂಗಲ ತಾಲೂಕಿನಲ್ಲಿ ರಂಗಮಂದಿರ ನಿರ್ಮಾಣಕ್ಕೆ ಪಟ್ಟಣದ ಸುತ್ತಮುತ್ತ ಸ್ಥಳ ಪರಿಶೀಲನೆ ನಡೆಯುತ್ತಿದೆ. ಶೀಘ್ರದಲ್ಲೆ ರಂಗಮಂದಿರ ನಿರ್ಮಾಣಕ್ಕೆ ಸ್ಥಳ ನೀಡಲಾಗುವುದು ಎಂದರು.
ಹರ್ಷ ಗ್ರೂಪ್ಸ್ನ ಅಧ್ಯಕ್ಷ ಎಸ್.ಶಿವಕುಮಾರ್ ಅವರು ನಾಟಕ ರಚನೆಕಾರ ಚಿಕ್ಕಮಾರನಹಳ್ಳಿ ದಿನೇಶ್ ಹಾಗೂ ಸಂಗೀತ ನಿರ್ದೇಶಕ ಎನ್.ನರಸಿಂಹಯ್ಯ ಅವರಿಗೆ ಫಲಕ ನೀಡಿ ಸನ್ಮಾನಿಸಿ ಗೌರವಿಸಿದರು.