ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಧಿಕಾರಿಗಳಿಂದ ಪೆಟ್ರೋಲ್ ಬಂಕ್ ಪರಿಶೀಲನೆ

Rashmi Kasaragodu
Updated On : 24 Jan 2014, 2:28 am

ಸೂಲಿಬೆಲೆ: ಇಲ್ಲಿನ ದೇವನಹಳ್ಳಿ ಮಾರ್ಗದಲ್ಲಿರುವ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ಆಳತೆಯಲ್ಲಿ ವಂಚನೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸೋಮವಾರ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ಬಗ್ಗೆ ಚೌಡರೆಡ್ಡಿ ಎಂಬಾತ ಸೂಲಿಬೆಲೆ ಪೊಲೀಸರಿಗೆ ದೂರು ನೀಡಿದ್ದರು. ಸಾರ್ವಜನಿಕರ ದೂರಿನ ಅನ್ವಯ ಸೋಮವಾರ ಪೆಟ್ರೋಲ್ ಬಂಕ್ಗೆ ದಿಡೀರ್ ಭೇಟಿ ನೀಡಿದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ತೂಕ ಮತ್ತು ಅಳತೆ ಸಹಾಯಕ ನಿಯಂತ್ರಕರಾದ ರೇವಣಕರ್ ಮತ್ತವರ ತಂಡ ಸಂಪೂರ್ಣ ಪರಿಶೀಲನೆ ನಡೆಸಿತು. ಈ ವೇಳೆ ಯಾವುದೇ ಲೋಪ ಕಂಡು ಬರಲಿಲ್ಲ. ಎಲ್ಲವೂ ಸರಿಯಾಗಿದ್ದು ಚೌಡರೆಡ್ಡಿ ಅವರ ಆರೋಪ ಸತ್ಯಕ್ಕೆ ದೂರವಾಗಿದೆ. ಅಧಿಕಾರಿಗಳು ಎಲ್ಲವನ್ನು ಪರಿಶೀಲನೆ ಮಾಡಿ ಸತ್ಯಾಪನಾ ಪ್ರಮಾಣ ಪತ್ರ ನೀಡಿದ್ದಾರೆ. ಈ ಬಗ್ಗೆ ಗ್ರಾಹಕರು ತಪ್ಪು ತಿಳಿಯುವದು ಬೇಡ ಎಂದು ಬಂಕ್ ವ್ಯವಸ್ಥಾಪಕ ವೆಂಕಟಾಚಲಯ್ಯ ಸ್ಪಷ್ಟಪಡಿಸಿದ್ದಾರೆ.


ಅಂಬಿಗರ ಚೌಡಯ್ಯನರವನ್ನು ಉಪೇಕ್ಷಿಸಿದ ಸರ್ಕಾರ: ಚಿನ್ನಸ್ವಾಮಿ


ಕನಕಪುರ: ಸಮಾಜದ ಅಂಕುಡೊಂಕುಗಳ ಬಗ್ಗೆ ವಚನಗಳ ಮೂಲಕ ಜಾಗೃತಿ ಮೂಡಿಸಿದ ಮಹಾಶರಣ ಅಂಬಿಗರ ಚೌಡಯ್ಯನರವನ್ನು ಸರ್ಕಾರ ಉಪೇಕ್ಷಿಸಿದೆ. ತುಂಗಭದ್ರಾ ನದಿ ತಟದಲ್ಲಿನ ದಾನಪುರದ ಐಕ್ಯಮಂಟಪ ಸಂರಕ್ಷಣೆಯಿಲ್ಲದೆ ಸೊರಗಿದೆ ಎಂದು ಗಂಗಾಮತಸ್ಥ ಸಂಘದ ಮುಖಂಡ ಚಿನ್ನಸ್ವಾಮಿ ಆರೋಪಿಸಿದ್ದಾರೆ.
ಕನಕಪುರದ ಕುರೂಪೇಟೆಯ ಜ್ಯೋತಿ ಕಾಲೋನಿ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಶರಣ ಅಂಬಿಗರ ಚೌಡಯ್ಯ ಜನ್ಮದಿನವನ್ನು ಸರ್ಕಾರ ರಜೆಯನ್ನಾಗಿ ಘೋಷಿಸಬೇಕು, ಚೌಡಯ್ಯನವರ ವಚನಗಳು ಹಾಗೂ ತತ್ವಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಂಸ್ಕೃತಿ ಇಲಾಖೆ ಮೂಲಕ ಕ್ರಮ ಕೈಗೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಸತೀಶ್ ಅಂಬಿಗರ ಚೌಡಯ್ಯನವರ ಬದುಕು, ಬರಹ ಹಾಗೂ ತತ್ವಗಳ ಬಗ್ಗೆ ಉಪನ್ಯಾಸ ನೀಡಿದರು. ಸಮುದಾಯದ ಮುಖಂಡರುಗಳಾದ ಚಾಮರಾಜ,ದೇವರಾಜು, ರಾಜಣ್ಣ, ಭೈರಪ್ಪ, ಕೃಷ್ಣಪ್ಪ, ಸಿದ್ದು, ಚಿಕ್ಕಣ್ಣ, ಮಂಜುನಾಥ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement