ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಪಘಾತ: ಬೆಸ್ಕಾಂ ನೌಕರ ಸಾವು

Rashmi Kasaragodu
Updated On : 25 Jan 2014, 2:09 am

ಹೊಸಕೋಟೆ: ಸವೀಪದ ಬೂದಿಗೆರೆ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗೋವಿಂದರಾಜು (49)ಎಂಬುವರು ಮೃತಪಟ್ಟಿದ್ದಾರೆ.
 ಬೆಂಗಳೂರಿನ ನಾಗವಾರದ ಬೆಸ್ಕಾಂ ಕಚೇರಿಯಲ್ಲಿ ಮೀಟರ್ ರೀಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸೀಗೆಹಳ್ಳಿಯ ಪ್ರಿಯಾಂಕ ನಗರದಲ್ಲಿ ವಾಸಿಸುತ್ತಿದ್ದರು.
  ಸ್ವಂತ ಊರು ಚಿಕ್ಕಬಳ್ಳಾಪುರದಿಂದ ಬೈಕ್ನಲ್ಲಿ ಹಿಂದಿರುಗುತ್ತಿದ್ದಾಗ ಬೂದಿಗೆರೆ ಕ್ರಾಸ್ ಸಮೀಪದ ಲಕ್ಷ್ಮೀ ಸ್ಟೀಲ್ ಕಾರ್ಖಾನೆ ಬಳಿ ಮುಂದೆ ಸಾಗುತ್ತಿದ್ದ ಕಬ್ಬಿಣದ ಸರಳು ತುಂಬಿದ್ದ ಟ್ರೈಲರ್ನ್ನು ಚಾಲಕ ಯಾವುದೇ ಮುನ್ಸೂಚನೆ ನೀಡದೆ ನಿಲುಗಡೆ ಮಾಡಿದ. ಬೈಕ್ ಹಿಂದಿನಿಂದ ಡಿಕ್ಕಿ ಹೊಡೆದು ಸರಳುಗಳು ತಲೆಗೆ ತಗುಲಿ ಸ್ಥಳದಲ್ಲೇ ಸಾವಿಗೀಡಾದರು. ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement