ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವೇತನಕ್ಕಾಗಿ ಆಗ್ರಹಿಸಿ ನೌಕರರ ಪ್ರತಿಭಟನೆ

Rashmi Kasaragodu
Updated On : 25 Jan 2014, 2:09 am

ನೆಲಮಂಗಲ: ತಾಲ್ಲೂಕಿನ ದಾಬಸ್ಪೇಟೆಯ ಆರಿಯಾ ಟೆಕ್ಸ್ ಗಾಮೆಂಟ್ಸ್ನ ಕಾರ್ಮಿಕರಿಗೆ ಕಳೆದ 3 ತಿಂಗಳಿಂದ ವೇತನ ನೀಡದೆ ಕಂಪನಿ ಮಾಲೀಕರು ಸತಾಯಿಸುತ್ತಿದ್ದಾರೆ ಎಂದು ಕಂಪನಿಯ ನೌಕರರು ಕಾರ್ಖಾನೆ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆ ಆವರಣದಲ್ಲಿ 545 ಮಂದಿ ಕಾರ್ಮಿಕರು ಕಳೆದ 3 ದಿನಗಳಿಂದಲೂ ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸುತ್ತಿದ್ದರೂ, ಕಾರ್ಖಾನೆಯ ಯಾವುದೇ ಅಧಿಕಾರಿಗಳು ಮತ್ತು  ಮಾಲೀಕರು ಪ್ರತಿಭಟನಾಕಾರರನ್ನು ಸೌಜನ್ಯಕ್ಕಾದರೂ ಭೇಟಿ ಮಾಡಲಿಲ್ಲ. ನಾವು ಅನ್ನ, ನೀರು ತ್ಯಜಿಸಿ ಪ್ರತಿಭಟಿಸುತ್ತಿದ್ದರೂ ನಮ್ಮ ಸಮಸ್ಯೆ ಕೇಳುವ ವ್ಯವಧಾನ ಆಡಳಿತ ವರ್ಗಕ್ಕಿಲ್ಲ ಎಂದು ಕಾರ್ಮಿಕರು ಅಳಲು ತೋಡಿಕೊಂಡರು.
ಆರೋಪ: ಕಂಪನಿಯಲ್ಲಿ ತಾರತಮ್ಯ ಧೋರಣೆ ನಡೆಸುತ್ತಿದ್ದಾರೆ. ಕೆಲವರಿಗೆ ಮಾತ್ರ ವೇತನ ನೀಡುತ್ತಿದ್ದಾರೆ. ಮುಕ್ಕಾಲು ಭಾಗದ ನೌಕರರಿಗೆ ವೇತನ ನೀಡಿಲ್ಲ.
ವೇತನ ಕೇಳಿದರೆ ಬೆಂಗಳೂರು ನಗರದಿಂದ ಕೆಲವು ರೌಡಿಗಳನ್ನೋ ಇಲ್ಲವೆ ಕೆಲವು ಸಂಘಟನೆಯವರನ್ನು ಕರೆಸಿ  ಅವರ ಮುಖಾಂತರ ಪಂಚಾಯ್ತಿ ಮಾಡಿಸುತ್ತಾರೆ. ಹೀಗೆ ಮಾಡಿ ಪ್ರತಿಭಟನೆ ನಡೆಸುವ ನೌಕರರನ್ನು ಮೌನವಾಗಿಸುವ ತಂತ್ರ ಎಣೆಯುತ್ತಾರೆ ಎಂದು ಆರೋಪಿಸಿದರು.
ಕಾರ್ಮಿಕರು  ಕಾರ್ಖಾನೆಯಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿರುವವರಿಗೆ ಸುಮಾರು 3 ತಿಂಗಳಿಂದ ವೇತನ ನೀಡಿರುವುದಿಲ್ಲ. ಹಾಗೆಯೇ ಬೆಳಿಗ್ಗೆ 6 ರಿಂದ ಸಂಜೆ 8 ಗಂಟೆಯವರೆಗೆ ಕೆಲಸ ಮಾಡಿದರೂ ನಮಗೆ ಸಂಬಳ ನೀಡಿರುವುದಿಲ್ಲ ಎಂದು ಕಾವಲುಗಾರ  ನಾಗರಾಜು ತಮ್ಮ ನೋವನ್ನು ನಮ್ಮ ತೋಡಿಕೊಂಡರು.
ಸೌಲಭ್ಯಗಳು ಮರೀಚಿಕೆ: ಕಾರ್ಖಾನೆಯಲ್ಲಿ ವೈದ್ಯಕೀಯ ಸೌಲಭ್ಯಗಳು ಮರೀಚಿಕೆಯಾಗಿವೆ. ವಾಹನಗಳಲ್ಲಿ ಸುಮಾರು 20ರಿಂದ 25 ಜನ ಕಾರ್ಮಿಕರನ್ನು ಹೆಚ್ಚುವರಿಯಾಗಿ ಕುರಿಗಳಂತೆ ತುಂಬಿಕೊಂಡು ಬರುತ್ತಾರೆ. ಈ ರೀತಿ ನಿಕೃಷ್ಟವಾಗಿ ನಮ್ಮನ್ನು ನಡೆಸಿಕೊಳ್ಳಲಾಗುತ್ತಿದೆ ಎಂದು ನೌಕರರು ತಮ್ಮ ನೋವು ತೋಡಿಕೊಂಡಿದ್ದಾರೆ.

ಅತಿ ಹೆಚ್ಚು ಸಮಯ ಕೆಲಸವನ್ನು ಮಾಡಿಸಿಕೊಂಡು ಅದಕ್ಕೆ ಸಮರ್ಪಕ ರೀತಿಯಲ್ಲಿ ಕಂಪನಿ ಸಂಬಳ ನೀಡುವುದಿಲ್ಲ. ನಮ್ಮನ್ನು ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ. ಆಡಳಿತ ವರ್ಗದ ಪರವಾಗಿರುವ ನೌಕರರಿಗೆ ಮಾತ್ರ ವೇತನ ನೀಡಲಾಗುತ್ತಿದೆ.
ಟಿ  ಮಹೇಶ್, ಕಾರ್ಖಾನೆ ನೌಕರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement