ಜೆಡಿಎಸ್ ಸದಸ್ಯರ ಬಹಿಷ್ಕಾರ ಸುಳ್ಳೇರಿ ಗ್ರಾ.ಪಂ. ಸಭೆ ರದ್ದು
ಚನ್ನಪಟ್ಟಣ: ಅಧ್ಯಕ್ಷೆ ಪತಿ ಮತ್ತು ಪಿಡಿಒ ದುರ್ವತೆನೆಗೆ ಬೇಸತ್ತು ಜೆಡಿಎಸ್ ಸದಸ್ಯರ ಬಹಿಷ್ಕಾರದಿಂದಾಗಿ ಸುಳ್ಳೇರಿ ಗ್ರಾಪಂ ಸಾಮಾನ್ಯ ಸಭೆ ಕೋರಂ ಕೊರತೆಯಿಂದ ರದ್ದಾಯಿತು. ಶುಕ್ರವಾರ ಅಧ್ಯಕ್ಷೆ ಅನುಪಮ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಗೆ ಜೆಡಿಎಸ್ ಸದಸ್ಯರು ಒಕ್ಕೊರಲಾಗಿ ಗೈರಾದರು.17 ಮಂದಿ ಸಂಖ್ಯಾಬಲ ಹೊಂದಿರುವ ಗ್ರಾಪಂನಲ್ಲಿ ಸಭೆ ನಡೆಯಲು ಅರ್ಧಕ್ಕಿಂತ ಹೆಚ್ಚಿನ ಸದಸ್ಯರು ಹಾಜರಾಗ ಬೇಕಿತ್ತಾದರೂ ಕೇವಲ 6 ಮಂದಿ ಸದಸ್ಯರು ಹಾಜರಿದ್ದರಿಂದ ಸಭೆ ಮುಂದೂಡಲಾಗಿದೆ. ಅಧ್ಯಕ್ಷರ ವಿರುದ್ಧ ಅಸಮಾಧಾನ: ಸಭೆಯ ಮುನ್ನಾದಿನ ಪಿಡಿಒ ಮತ್ತು ಅಧ್ಯಕ್ಷರನ್ನು ಭೇಟಿ ಮಾಡಿದ ಜೆಡಿಎಸ್ ಸದಸ್ಯರು, ಗ್ರಾಪಂನಲ್ಲಿ ಅಮರ್ಪಕವಾಗಿ ಕಾರ್ಯ ನಿರ್ವಹಣೆ ನಡೆಯುತ್ತಿಲ್ಲ, ಅಧ್ಯಕ್ಷರು ಪಕ್ಷಪಾತ ಮಾಡುತ್ತಾರೆ ಎಂದು ಆರೋಪಿಸಿದರು.
ಕಾನೂನು ಅರಿವು ಪಡೆಯುವುದು
ಪ್ರತಿಯೊಬ್ಬ ಭಾರತೀಯನ ಹಕ್ಕು
ಚನ್ನಪಟ್ಟಣ: ಕಾನೂನು ಅರಿವು ಪಡೆದುಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಸಂವಿಧಾನಾತ್ಮಕ ಹಕ್ಕು ಎಂದು ಹಿರಿಯ ನ್ಯಾ. ಕಿರಣ್ಕಿಣಿ ಅಭಿಪ್ರಾಯಪಟ್ಟರು. ಇಲ್ಲಿನ ಹೊಂಬೇಗೌಡ ಕೈಗಾರಿಕಾ ತರಬೇತಿ ಕೇಂದ್ರದ ಎನ್ಎಸ್ಎಸ್ ಘಟಕ ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಶ್ಯಾನುಭೋಗನಹಳ್ಳಿ ಗ್ರಾಮದಲ್ಲಿ ನಾಗರಿಕರಿಗೆ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಿವಿಲ್ ನ್ಯಾಯಾಧೀಶ ಬಿ.ದಶರಥ, ಅಪರ ನ್ಯಾಯಾಧೀಶ ಬಿ.ಕೆ.ನಾಗೇಶ್ಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಹನುಮಂತಯ್ಯ, ವಕೀಲರಾದ ಸಿ.ಹರೀಶ್, ಎಂ.ಎಲ್.ಶಿವಪ್ರಸಾದ್, ವಕೀಲರ ಸಂಘದ ಕಾರ್ಯದರ್ಶಿ ಎಂ.ಕೆ.ಪ್ರಭು, ಹಿರಿಯ ವಕೀಲ ಟಿ.ಎನ್.ಲಕ್ಷ್ಮಣ್, ಬಿ.ಕೃಷ್ಣಪ್ಪ, ಧನಂಜಯ ಸಿಬ್ಬಂದಿ ಕಾಡೇಗೌಡ, ಪ್ರಾಂಶುಪಾಲ ಕೆ.ಎಸ್.ರಮೇಶ್, ಯೋಜನಾಧಿಕಾರಿ ಮರಿದೇವರು ಇದ್ದರು.