ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಯುವ ಸಮೂಹ ದುಶ್ಚಟಗಳ ದಾಸರಾಗಬೇಡಿ: ಡಾ. ರಜನಿ

Rashmi Kasaragodu
Updated On : 26 Jan 2014, 2:33 am


ರಾಮನಗರ: ಯುವ ಸಮುದಾಯ ದುಶ್ಚಟಗಳಿಂದ ದೂರವಿದ್ದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ದುಶ್ಚಟಕ್ಕೆ ಒಳಗಾದವರು ಅಂಕಗಳಿಸುವ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರೂ ಜೀವನದ ಪರೀಕ್ಷೆಯಲ್ಲಿ ಖಂಡಿತ ಅನುತ್ತೀರ್ಣರಾಗುತ್ತಾರೆ ಎಂದು ಜಿಲ್ಲಾಸ್ಪತ್ರೆ ಮನೋವೈದ್ಯೆ ಡಾ.ರಜನಿ ತಿಳಿಸಿದರು.  ನಗರ ಹೊರ ವಲಯದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರೋಟರಿ ಸಂಸ್ಥೆಯಿಂದ  ನಡೆದ ಮಾದಕ ಔಷಧಿಗಳ ದುಷ್ಪಾರಿಣಾಮ ಕುರಿತ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಆಕರ್ಷಣೆಗಳಿಗೆ ಒಳಗಾಗಿ ಕ್ಷಣಿಕ ಸುಖಕ್ಕೆ ದಾಸರಾಗುವ ಮೂಲಕ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳದಂತೆ ಕರೆ ನೀಡಿದರು. ರೋಟರಿ ಅಧ್ಯಕ್ಷ ಚಂದ್ರಶೇಖರ್, ಸಹಾಯಕ ಔಷಧ ನಿಯಂತ್ರಣಾಧಿಕಾರಿ ಎಂ.ಸುರೇಶ್, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಎಲ್. ಚಂದ್ರಶೇಖರ್ ಇದ್ದರು.

ರಾಮನಗರ ತಾಲೂಕು ಕಸಾಪ ಅಧ್ಯಕ್ಷ  ಸ್ಥಾನಕ್ಕೆ ರಾಜಿನಾಮೆ

ರಾಮನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸಿದ್ದಲಿಂಗೇಗೌಡ ರಾಜಿನಾಮೆ ಸಲ್ಲಿಸಿದ್ದಾರೆ. ತಮ್ಮ ಪದತ್ಯಾಗಕ್ಕೆ ವಯಕ್ತಿಕ ಕೆಲಸದ ಒತ್ತಡವೇ ಕಾರಣ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾಜಿನಾಮೆ ಪತ್ರವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ನಾಗೇಶ್ ಅವರಿಗೆ ರವಾನಿಸಿದ್ದು, ಕಳೆದ ಒಂದೂವರೆ ವರ್ಷದಿಂದ ಹುದ್ದೆಯಲ್ಲಿದ್ದು ಕನ್ನಡದ ತೇರನ್ನು ಎಳೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಕಸಾಪ ಶತಮಾನ ಸಂಭ್ರಮಾಚರಣೆ ಪ್ರಯುಕ್ತ ಸಂಸ್ಥೆಯಲ್ಲಿ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿರುವ ಅವರು, ನೂತನವಾಗಿ ನೇಮಿಸಲ್ಪಡುವ ಅಧ್ಯಕ್ಷರಿಗೆ ಅಗತ್ಯ ಸಹಕಾರ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement